Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜಂತೊಟ್ಟುದಾ ಕೆಸರ್ದ ಗೊಬ್ಬು ಕಾರ್ಯಕ್ರಮ ಉದ್ಘಾಟನೆ

ಸುರತ್ಕಲ್ : ಆಧುನಿಕತೆಯ ನಡುವೆಯೂ ಮಾನವೀಯ ಮೌಲ್ಯಗಳಿಗೆ ಪೂರಕವಾದ ನಮ್ಮ ಮೂಲ ಸಾಂಪ್ರದಾಯಕ ಕಟ್ಟುಪಾಡುಗಳ ಆಚರಣೆಯಿಂದ ನಮ್ಮತನ ಇನ್ನಷ್ಟು ಭದ್ರಗೊಳ್ಳಲಿದೆ ಎಂದು  ಮೂಲ್ಕಿ ಮೂಡಬಿದಿರೆ ಕ್ಷೇತ್ರದ  ಶಾಸಕ  ಉಮಾನಾಥ ಕೋಟ್ಯಾನ್  ಹೇಳಿದರು.ಅವರು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಗಣೇಶಪುರ,ಹಿಂದು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ, ಕ್ರೀಡಾ ಭಾರತಿ ಮಂಗಳೂರು, ಕುತ್ತೆತ್ತೂರು ಜಂತಬೆಟ್ಟು ಗ್ರಾಮಸ್ಥರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 24 ನೇ ವರ್ಷದ ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಪಯ್ಯಾಲು ಮಜಲಕೋಡಿ ಸಂಜೀವ ಶೆಟ್ಟಿ ಮತ್ತು ಪಡ್ಡಾಯಿಬೆಟ್ಡು ವನಿತಾ ಬೋರಣ್ಣ ಶೆಟ್ಟಿ ಜಂತೊಟ್ಟು ಕುತ್ತೆತ್ತೂರು ಇವರ ಗದ್ದೆಯಲ್ಲಿ ನಡೆದ ಜಂತೊಟ್ಡುದಾ ಕೆಸರ್ದ ಗೊಬ್ಬು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪರಿಸರ ಪ್ರಕೃತಿ ಹಿಂದಿನ ಸಂಸ್ಕೃತಿ ಅಚಾರ ವಿಚಾರಗಳನ್ನು ಉಳಿಸಿದರೆ ಮಾತ್ರ ಮಾನವನ ಬದುಕು ಸುರಕ್ಷಿತ ಎಂದರು. ವೇದಿಕೆಯಲ್ಲಿ ಅಖಿಲ ಭಾರತೀಯ ಕ್ರೀಡಾ ಭಾರತಿ ಕೋಶಾಧ್ಯಕ್ಷ ಮಿಲಿಂದ್ ದಾಂಗೆ,ಜಂತಬೆಟ್ಟು ಬಂಟ ಜುಮಾದಿ ಸೇವಾ ಸಮಿತಿ ಕುತ್ತೆತ್ತೂರು ಅಧ್ಯಕ್ಷ ಮುದ್ದಣ್ಣ ಶೆಟ್ಟಿ, ಹಯವದನ ಭಟ್ ಮುಡಿತ್ತಾಯ,ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀನಿವಾಸ ಅಸ್ರಣ್ಣ,ಮಂಗಳೂರು ಎಸ್ ಸಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪವೆಲ್,ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಶೋಕ್ ಶೆಟ್ಟಿ, ಕರುಣಾಕರ ಶೆಟ್ಟಿ ಅಡಿಮಾರುಗುತ್ತು,ಪ್ರಸನ್ನ ಶೆಟ್ಟಿ ಪರ್ಲಬೈಲು, ಕೊಡೆತ್ತೂರು ಅರಸು ಕುಂಜಿರಾಯ  ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಲೋಲಾಕ್ಷಿ ನಾರಾಯಣ ಶೆಟ್ಟಿ ಕುತ್ತೆತ್ತೂರು, ತಿಲಕ್ ರಾಜ್ ಕೃಷ್ಣಾಪುರ,ಧರ್ಮೆಂದ್ರ ಗಣೇಶಪುರ,ಉದಯಕುಮಾರ್ ಶೆಟ್ಟಿ ಕುತ್ತೆತ್ತೂರು, ರಾಜಾರಾಮ್ ಸಾಲ್ಯಾನ್,  ಚಲನಚಿತ್ರ ನಟ ಸ್ವರಾಜ್ ಶೆಟ್ಟಿ,ಸುನೀಲ್ ಡಿ ರೈ,ಕುತ್ತೆತ್ತೂರು ಬ್ರಹ್ಮಸ್ಥಾನ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಉದ್ಯಮಿ ಪದ್ಮನಾಭ ಮೊಯ್ಲಿ,ನಾಗೇಶ್ ಶೆಟ್ಟಿ ಕಲ್ಲೋಳಿಬಾಳಿಕೆ,ವಿಶ್ವನಾಥ ಭಂಡಾರಿ ಪುಳಿತ್ತೂರು,ಉದ್ಯಮಿ ಪ್ರಶಾಂತ್ ಮುಡಾಯಿಕೋಡಿ,ಸುಜೀರ್ ಶೆಟ್ಟಿ ಸೂರಿಂಜೆ, ಮನಪಾ ಮಾಜಿ ಸದಸ್ಯ ಲೋಕೇಶ್ ಬೊಳ್ಳಾಜೆ, ಪದ್ಮನಾಭ ಶೆಟ್ಟಿ ಕುತ್ತೆತ್ತೂರು, ಜಯಪ್ರಕಾಶ್ ಸೂರಿಂಜೆ, ಲೋಕನಾಥ್ ಭಂಡಾರಿ,ಜಯಶೀಲ ಸೂರಿಂಜೆ, ವಸಂತರಾವ್,ಮನೋಹರ ಶೆಟ್ಟಿ ಸೂರಿಂಜೆ, ಅಭ್ಯುದಯ ಸೇವಾ ಟ್ರಸ್ಟ್ ಅಧ್ಯಕ್ಷ ಜಯಕುಮಾರ್,ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಹರೀಶ್ ಮುಡಾಯಿಕೋಡಿ, ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ, ಕೋಶಾಧಿಕಾರಿ ಭಾಸ್ಕರ್ ಕುಲಾಲ್,ಪುಷ್ಷರಾಜ್ ಕಣ್ವತೀರ್ಥ,ಪ್ರಸಾದ್ ಎಂ ಅಂಚನ್ ಮುಂತಾದವರು ಉಪಸ್ಥಿತರಿದ್ದರು.