Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದು: ಮಾಧವ ಉಳ್ಳಾಲ್

ಸುರತ್ಕಲ್: ವೇಗವಾಗಿ ಬೆಳೆಯುತ್ತಿರುವ ನಮ್ಮ ಊರುಗಳಲ್ಲಿಯೂ ಕೃಷಿ, ಕಾಡು ಮರೆಯಾಗಿ ಕಟ್ಟಡಗಳು ತಲೆಎತ್ತುವ ಈ ಸಂದರ್ಭದಲ್ಲಿ, ಭವಿಷ್ಯದಲ್ಲಿ ಉತ್ತಮ ಪರಿಸರ, ಪ್ರಕೃತಿ  ವೃಕ್ಷ ಮತ್ತು ಪಕ್ಷಿಗಳ ಉಳಿವಿಗಾಗಿ ವಿದ್ಯಾರ್ಥಿಗಳು ಗಮನದಲ್ಲಿಟ್ಟು ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಖ್ಯಾತ ಪರಿಸರವಾದಿ ಮಾಧವ ಉಳ್ಳಾಲ್ ಹೇಳಿದರು.
       ಪ್ರೈಮಸಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಬೈಕಂಪಾಡಿ ಮತ್ತು ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ಇದರ ಜಂಟಿ ಆಶ್ರಯದಲ್ಲಿ ಮಧ್ಯ ವಾಲ್ಮೀಕಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಅವರು ಮಾತನಾಡಿದರು.
        ಕಾಟಿಪಳ್ಳ ಲಯನ್ಸ್ ಕ್ಲಬ್ ನ ಅಧ್ಯಕ್ಷ ಪಿ. ದಯಾಕರ್ ಸುವರ್ಣ ಅಧ್ಯಕ್ಷತೆ ವಹಿಸಿದ್ದು,  ಪ್ರೈಮಸಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನ ಪರಿಸರ,ಆರೋಗ್ಯ ಮತ್ತು ಸುರಕ್ಷತೆ ವಿಭಾಗದ ಮುಖ್ಯ ಸಲಹೆಗಾರ ಜೀವನ್ ಉಳ್ಳಾಲ್, ಪ್ರಬಂಧಕ ಪ್ರದೀಪ್ ಕುಮಾರ್,  ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಪ್ರಬಂದಕಿ ಸೌಮ್ಯ,   ಲಯನ್ಸ್ ವಲಯ ಅಧ್ಯಕ್ಷ ದೀಪಕ್ ಪೆರ್ಮುದೆ, ಲಯನ್ಸ್ ಪ್ರಾಂತೀಯ ರಾಯಭಾರಿ ಮಾಧವ ಎಸ್. ಶೆಟ್ಟಿ,  ಕಾಟಿಪಳ್ಳ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಉಮಾನಾಥ ಅಮೀನ್, ಶಿವಪ್ರಸಾದ್ ಬಾಳ, ವಿಶ್ವನಾಥ್ ಭಂಡಾರಿ, ಸದಸ್ಯರುಗಳಾದ ಪುಷ್ಪರಾಜ್ ಅಡಪ, ಆನಂದ ಅಮೀನ್, ಸ್ಥಳೀಯ ಹಿರಿಯ ಮುಖಂಡ ಭೋಜ ಅಂಚನ್ , ಶಿಕ್ಷಕಿ ತಾರಾ ಬಾಯಿ ಮೊದಲಾದವರು ಉಪಸ್ಥಿತರಿದ್ದರು.
     ಮಹರ್ಷಿ ವಾಲ್ಮೀಕಿ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಸುನಂದ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಧನ್ಯವಾದವಿತ್ತರು.