ಶಿಮಂತೂರು, ಪರಂಕಿಲ,ಅವಧೂತ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಧ್ಯಾನ ಮಂದಿರದಲ್ಲಿಗುರು ಪೂರ್ಣಿಮಾ ಕಾರ್ಯಕ್ರಮ
ಗುರು ಪೂರ್ಣಿಮಾ ಕಾರ್ಯಕ್ರಮ ಬುಧವಾರ ವಿಜೃಂಭಣೆಯಿಂದ ನಡೆಯಿತು
ಬೆಳಗ್ಗೆ ಕ್ಷೇತ್ರದ ಅರ್ಚಕರಿಂದ ಗುರುದೇವರಿಗೆ ಸೀಯಾಳ ಅಭಿಷೇಕ,ನಿತ್ಯ ಪೂಜೆ, ಭಜನಾ ಕಾರ್ಯಕ್ರಮ ನಡೆಯಿತು,ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ,ಮಹಾ ಅನ್ನಸಂತರ್ಪಣೆ ನಡೆಯಿತು
ಈ ಸಂದರ್ಭ ಚಲನಚಿತ್ರ ನಟ ವಿಜಯಕುಮಾರ್ ಕೊಡಿಯಾಲ್ ಬೈಲ್, ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್, ಮಂದಿರದ ಪದಾಧಿಕಾರಿಗಳಾದ ಸದಾಶಿವ, ಮನೋಹರ ಕೋಟ್ಯಾನ್, ಗಂಗಾಧರ ಶೆಟ್ಟಿ ಬರ್ಕೆ ತೋಟ, ರಾಮದಾಸ ಶೆಟ್ಟಿ ಬಾಳಿಕೆ ಮನೆ, ರಾಜೇಶ್ ಕುಡ್ಲ, ಚಂದ್ರ ಕುಮಾರ್, ರೂಪ ಕೊಡಿಯಾಲ್ ಬೈಲ್, ವಿಜಯ ಕೋಕಿಲ, ಶಾಂತರಾಮ ಹೆಗ್ಡೆ ತೆಂಗಾಳಿ, ನಿತಿನ್ ಶೆಟ್ಟಿ ಪಂಜಿನಡ್ಕ, ವಿಜಿತ್ ಶೆಟ್ಟಿ ಉತ್ತಮ್ ಪೂಜಾರಿ ಮೈಲೊಟ್ಟು,ದೇವಪ್ರಸಾದ್ ಕೆಂಪುಗುಡ್ಡೆ, ಹರೀಶ್ ಶೆಟ್ಟಿ, ದಿನೇಶ್ಚಂದ್ರ ಅಜಿಲ, ಕಿಶೋರ್ ಶೆಟ್ಟಿ ತೆಂಗಾಳಿ ಮತ್ತಿತರರು ಉಪಸ್ಥಿತರಿದ್ದರು