Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಸಿಹಿತ್ಲು: ಖ್ಯಾತ ರಂಗ ಕರ್ಮಿ, ಪತ್ರಕರ್ತ ಪರಮಾನಂದ ವಿ ಸಾಲ್ಯಾನ್ ನಿಧನ - ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸಂತಾಪ

ಮುಲ್ಕಿ: ಖ್ಯಾತ ರಂಗ ಕರ್ಮಿ, ಪತ್ರಕರ್ತ ಸಸಿಹಿತ್ಲು ನಿವಾಸಿ ಪರಮಾನಂದ ವಿ ಸಾಲ್ಯಾನ್(65) ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ನಿಧನರಾದರು 
ಅವರು ಮುಂಗಾರು ಮತ್ತು ಹೊಸದಿಗಂತ ದಿನಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ,>ಬಿಲ್ಲವರ ವಿಶ್ವವಾಣಿ ಮತ್ತು ಯುವ ವಾಹಿನಿ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ್ದರು 
 ರಂಗ ಸುದರ್ಶನ, ಪರಮ ಪದ್ಮ ಕಲಾವಿದರು ಮತ್ತು ಸುದರ್ಶನ್ ಕ್ರಿಯೇಷನ್ ಸಂಸ್ಥೆಯ ನಿರ್ದೇಶಕರಾಗಿ
 ದುಬಾಯಿ, ಅಬುದಾಬಿ, ಕವೈಟ್, ಬೆಹರೀನ್ ಮತ್ತು ದೇಶದ ವಿವಿಧೆಡೆ ಕಾರ್ಯಕ್ರಮ ನೀಡಿದ್ದರು
ಸಾಕ್ಷ್ಯ ಚಿತ್ರ ನಿರ್ಮಾಣ:
ಬಾರೆರ್ ಬೀರೆರ್ ದೇಯಿ ಅಮ್ಮ ಬತ್ತೆರ್ ಸಿರಿಗಂಧದ ಕರಿಯಜ್ಜೆರ್, ಸಸಿಬಿಟ್ಸ್‌ ಉಳ್ಳಾಯನ ಧರ್ಮ ನಡೆ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ದರು
ಸೇವೆ ಮತ್ತು ನೋವು, ನಾಯರ್ ಅರ್ವದೆ ಬೂತಲೆ ಮಸಣ ಎಂಬ ಕಿರು ಚಿತ್ರ ನಿರ್ಮಾಣ ಹಾಗೂ ಪೌರಾಣಿಕ ನಾಟಕ:ಮಾಯೊದ ದೇವೊಂಗುಲು,ಬಾಲೆಗೊಲಿಯಿನ ಭ್ರಾಮರಿಕಡಲ್ ಉರ್ಕ್ರಂಡ್,ಸೀತೆಗ್ ಇತ್ತೆ ಅರ್ಥಾಂಡ್ ತುಳಸಿ ಪುಟ್ಟುದ ಗುಟ್ಟು ಪಾಂಚಾಲಿ (ಕನ್ನಡ) ಮಾಯಕದ ಮಾಣಿ
ಲೀಲೆದ ಬಾಲೆ ಗೋಪಾಲೆ ಪುರ್ಸೆ ಬಿರ್ಸೆ ಶ್ರೀರಾಮೆ ಬಲಿದಾನ ಚೌತಿದ ಚಂದ್ರೆ ಶನಿದೃಷ್ಟಿ ಬೃಂದ ಮೋಲೆ ವರ್ಣ ಯಾವುದು ಕರ್ಣ ನಿನ್ನ (ಕನ್ನಡ) ನಿರ್ಮಾಣ ಮಾಡಿದ್ದರು 
ಐತಿಹಾಸಿಕ ನಾಟಕಗಳಾದ
ಬಾರೆರ್ ಬೀರೆರ್ ದೇಯಿ ತೆಡಿಲ ಕಿಡಿ ತಿಗಲೆ ಮಂಜನೆ ತಂಕದ ಪೂಂಜೆ,ಅರುವದೆ
ಶಿವ ಪುರ್ಸಾದ ಬಬ್ಬರ್ಯ
ಬೂತಾಲೆ ಅಬ್ದಾ ಅಬ್ದಕ್ಕನೇ ಮಡ್ಡಿ ಕಳೆದ್ ಮಡಿ ಅಮರ್ ಸಿರಿಕುಲು ಒಂಜಿ ಸಿರಿ ರಡ್ ಬೊಂಡ ದರ್ವು ದಂಟಿನ ಸಿರಿ
ಉಲ್ಲಾಯೆ ಮಲ್ಲಾಯೆ ಶಿಲುಬೆ ಮತ್ತು ಗಲಭೆ (ಕನ್ನಡ) ಸಿಡಿಲ ಕಿಡಿ(ಕನ್ನಡ)ಶಿವದೂತೆ ಗುಳಿಗೆ ನಾಟಕದ ಸಂಭಾಷಾಣೆ,
ಸಾಮಾಜಿಕ ನಾಟಕಗಳಾದ
ಮಸ್ತ್ ಮಸ್ತ್ ಮೋಕೆ ಮೆಗ್ಗಿಗಾದ್ ಸತ್ಯ ತೆರಿಯೆ ಪುರಲ್ ಒಂಜಿ ರಾತ್ರೆ ಒಂಜಿ ಪಗೆಲ್,ದಯೆ ಪಿದಡಿಯ
ಪ್ರಹಸನಗಳಾದ
ವಂದೇ ಮಾತರಂ ನಾರಿ ಅವನ ಕನಸು ನಾಯರ್ ತುಳುವ ಚಾವಡಿ ತುಳುವ ನಡಕೆ,ಕಾಲಚಕ್ರ ಸೇವೆ
ಮತ್ತು ನೋವು ಸಂವೇದನೆ ಬಂಟಾಯನ ಅಜ್ಜನ ಕನ ಅಜ್ಜಿನ ಋಣ,ಭೂಮಿ ಬೆಚ್ಚಾಂಡ್  ನಿರ್ಮಾಣ ಮಾಡಿದ್ದರು 
ಪ್ರಶಸ್ತಿ-ಪುರಸ್ಕಾರ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸಿರಿ ಮಾಧ್ಯಮ ವುರಸ್ಕಾರ-2022 ಪರಿಷತ್ತಿನಿಂದ ಸಾಹಿತ್ಯ ಗೌರವ ಕಾರ್ಕಳದಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ರಂಗ ಭೀಷ್ಮ ಪುರಸ್ಕಾರ,ದ.ಕ ಜಿಲ್ಲಾ ಚುಟುಕು ಸಾಹಿತ್ಯ,ಮಲ್ಪೆ ರಾಘವೇಂದ್ರ ರಾಷ್ಟ್ರ ಪ್ರಶಸ್ತಿ ಶಿಕ್ಷಕ ದತ್ತಿ ನಿಧಿಯಿಂದ ಗುರುಶ್ರೀ ಪ್ರಶಸ್ತಿ ಯುಗಮರುಷ ಪತ್ರಿಕೆ ಮತ್ತು ವಿಜಯ ಕಲಾವಿದರು ಕಿನ್ನಿಗೋಳಿ ಇವರಿಂದ ಬಹುಮುಖಿ ಪ್ರತಿಭೆ ಪುರಸ್ಕಾರ ತುಳುಕೂಟ ಮಂಗಳೂರು ಇವರಿಂದ ರತ್ನವರ್ಮ ಹೆಗ್ಗಡೆ ಸಂಘ, ಬೆಹರಿನ್ ಇವರಿಂದ ಕಲಾ ಸಾಧಕ ಗೌರವ ಬಿಲ್ಲವರ ಬಳಗ ದುಬೈ ಇವರಿಂದ ಅಪರೂಪದ ಸಾಧಕ ಪ್ರಶಸ್ತಿ ಗುರುಸ್ಮಾರಕ ತುಳು ನಾಟಕ ರಚನೆ ಬಹುಮಾನ ತುಳುಕೂಟ ಕುವೈಟ್ ಇವರಿಂದ ರಂಗ ಸಾಧಕ ಗೌರವ ಬೆಹರಿನ್ ಕನ್ನಡ ಸೇವಾ ಸಮಿತಿ ಬೆಹರಿನ್ ಇವರಿಂದ ಸೃಜನಶೀಲ ನಿರ್ದೇಶಕ ಗೌರವ ಕೊಲ್ಯ ರಮಾನಂದ ಸೇವಾ ಆಶ್ರಮದಿಂದ ಕಲಾಶ್ರೀ ಪ್ರಶಸ್ತಿ ಬಿಲ್ಲವರ ಅಸೋಸಿಯೇಶನ್ ಮುಂಬೈ ಇವರಿಂದ ಸಮಾಜ ರತ್ನ ಪ್ರಶಸ್ತಿ ಬಂಟರ ಸಂಘ ಸುರತ್ಕಲ್ ಇವರಿಂದ ಅಪೂರ್ವ ಸಾಧಕ ಗೌರವಕಾಂತಾವರ ಅನುದಾನಿತ ಕನ್ನಡ ಶಾಲೆ ಕಾಂತವರ ಇವರಿಂದ ರಂಗ ಶಿಕ್ಷಕ ಗೌರವ,ಯುವವಾಹಿನಿ (ರಿ) ಮೂಲ್ಕಿ ಇವರಿಂದ ಆಟಿದ ಚಾವಡಿ ತಮ್ಮನ ಅಭಿನಯ ಮಂಟಪ ಮುಂಬೈ ಇವರಿಂದ ರಂಗ
ಸನ್ಮಾನ,ವಿಜಯಕುಮಾ‌ರ್ ಕೊಡಿಯಾಲಬೈಲ್‌ ಮಾತಾಪಿತರ ನೆನಪಿನ ಪುರಸ್ಕಾರ,ತುಳು ನಾಟಕ ಕಲಾವಿದರ ಒಕ್ಕೂಟದಿಂದ "ತೌಳವ ಶ್ರೀ ಪ್ರಶಸ್ತಿ'' ಗುರುಪುರ ಬಂಟರ ಸಂಘದ ಕಲಾ ಗೌರವ ಪ್ರಶಸ್ತಿ ಪಡೆದಿದ್ದರು
ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ, ಶ್ರೀ ಸಾರಂತಾಯ ಗರೋಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು
ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ,ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು,ಶಾಸಕ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ,ಮಾಜೀ ಸಚಿವ ಅಭಯ ಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು,ಪ್ರಿಯದಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ, ಹಳೆಯಂಗಡಿ ಬಿಲ್ಲವ ಸಂಘದ ಚಂದ್ರಶೇಖರ್ ನಾಣಿಲ್, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ,ಶ್ರೀ ಸಾರಂತಾಯ ಗರೋಡಿ ದೈವಸ್ಥಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,
ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ