ಶಿಕ್ಷಣದ ಜೊತೆಗೆ ದೈಹಿಕ ಶಕ್ತಿ ಬೆಳೆಸಿ: ದೀಪಕ್ ಪೆರ್ಮುದೆ
ಚೇಳೈರು: ಹೆತ್ತವರಿಂದ ದೂರವಿದ್ದು, ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಶಿಕ್ಷಕರನ್ನೇ ತಮ್ಮ ಪೋಷಕರೆಂದು ತಿಳಿದು, ಶಿಕ್ಷಣದ ಜೊತೆಗೆ, ಉತ್ತಮ ಆಹಾರವನ್ನು ಸೇವಿಸುವ ಮೂಲಕ ತಮ್ಮ ಶಾರೀರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 9 ವಲಯ 1ರ ವಲಯ ಅಧ್ಯಕ್ಷ ದೀಪಕ್ ಪೆರ್ಮುದೆ ಹೇಳಿದರು.
ಅವರು ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ವತಿಯಿಂದ ಮಧ್ಯ ಮಹರ್ಷಿ ವಾಲ್ಮೀಕಿ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಉಪಹಾರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿದರು.
ಕಾಟಿಪಳ್ಳ ಲಯನ್ಸ್ ಕ್ಲಬ್ ನ ಅಧ್ಯಕ್ಷ ಪಿ. ದಯಕರ, ಲಯನ್ಸ್ ಪ್ರಾಂತ್ಯ 9 ರ ಪ್ರಾಂತ್ಯ ರಾಯಭಾರಿ ಮಾಧವ ಎಸ್ ಶೆಟ್ಟಿ, ಮಾಜಿ ಅಧ್ಯಕ್ಷ ಉಮಾನಾಥ್ ಅಮೀನ್, ವಿಶ್ವನಾಥ್ ಭಂಡಾರಿ, ಶಿವಪ್ರಸಾದ್ ಬಾಳ, ಲೋಕೇಶ್ ಕುರುವನ, ಕಾರ್ಯದರ್ಶಿ ಗಣೇಶ್ ಶೆಟ್ಟಿ, ಪುಷ್ಪರಾಜ್ ಅಡಪ, ಆನಂದ ಅಮೀನ್ ಮೊದಲಾದವರು ಉಪಸ್ತಿತರಿದ್ದರು.
ಮಹರ್ಷಿ ವಾಲ್ಮೀಕಿ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಸುನಂದಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.