Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪಂಜ : ನವಜ್ಯೋತಿ ಮಹಿಳಾ ಮಂಡಳಿ ಪಂಜ ಕೊಯಿಕುಡೆ ಇದರ ವಾರ್ಷಿಕ ಮಹಾಸಭೆ ಮತ್ತು ಆಟಿಡೊಂಜಿ ಕೂಟ ಕಾರ್ಯಕ್ರಮ

ಪಂಜ : ನವಜ್ಯೋತಿ  ಮಹಿಳಾ ಮಂಡಳಿ ಪಂಜ  ಕೊಯಿಕುಡೆ ಇದರ ವಾರ್ಷಿಕ ಮಹಾಸಭೆ ಮತ್ತು  ಆಟಿಡೊಂಜಿ ಕೂಟ ಕಾರ್ಯಕ್ರಮವು  ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಳಿಯ ಅಧ್ಯಕ್ಷ ಮಮತಾ ಶೆಟ್ಟಿ ಪಂಜ ವಹಿಸಿದ್ದರು.ಮುಖ್ಯ ಅತಿಥಿಯಾಗಿ  ಭಾಗವಹಿಸಿದ ಮಧ್ಯ ಶಾಲೆಯ ಶಿಕ್ಷಕಿ  ಶ್ವೇತಾ ಮನೋಜ್ ಪೂಜಾರಿ ಅವರು   ಚೆನ್ನಮಣೆ ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ  ಉಪಾಧ್ಯಕ್ಷರಾದ ತಾರಾ ಶೆಟ್ಟಿ, ನಿಶ್ವಿತ ದೇವಾಡಿಗ, ಮಮತಾ ದೇವಾಡಿಗ, ಕುಶಲ ಶೇಖರ್ ಮತ್ತು  ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು ಮಮತಾ ಶೆಟ್ಟಿ ಸ್ವಾಗತಿಸಿದರು ಕುಶಲ ಶೇಖರ್ ಕಾರ್ಯಕ್ರಮ ನಿರೂಪಿಸಿದರು. ತಾರಾ ಶೆಟ್ಟಿ ವಂದಿಸಿದರು.