Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪಂಜ ಕೊಯಿಕುಡೆ : ಶ್ರೀವಿಠೋಬ ಭಜನಾ ಮಂದಿರದಲ್ಲಿ "ಶ್ರೀ ವಿಠೋಬ ಕ್ಷೇಮ ನಿಧಿ" ಸ್ಥಾಪನೆ- ಹಾರ್ಮೋನಿಯಂ ತರಗತಿಗಳಿಗೆ ಚಾಲನೆ


ಪಕ್ಷಿಕೆರೆ :ಪಂಜ ಕೊಯಿಕುಡೆ  ಇಲ್ಲಿನ ಪ್ರಸಿದ್ಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾದ ಶ್ರೀ ವಿಠೋಬ ಭಜನಾ ಮಂಡಳಿ ಪಂಜ ಕೊಯಿಕುಡೆ ಇದರ ಸದಸ್ಯರ ಹಾಗೂ ಊರಿನ ಮಾನವೀಯ ಮನಸ್ಸುಗಳ ಸಂಕಲ್ಪದಂತೆ ಹಮ್ಮಿಕೊಳ್ಳಲಾದ "ಶ್ರೀ ವಿಠೋಬ ಕ್ಷೇಮ ನಿಧಿ" ಸ್ಥಾಪನೆ ಮತ್ತು ಹಾರ್ಮೋನಿಯಂ ತರಗತಿಯ ಶುಭಾರಂಭ ಕಾರ್ಯಕ್ರಮವು ಜುಲೈ 12 ರ ಭಾನುವಾರದಂದು ಮಂದಿರದ ಶಾಂತಾರಾಮ ಶೆಟ್ಟಿ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಮಹಾಗಣಪತಿ ಮಂದಿರದ ಅರ್ಚಕರಾದ  ಸುರೇಶ್ ಭಟ್ ಅವರು ದೀಪ ಪ್ರಜ್ವಲಿಸುವ ಮೂಲಕ ಭಕ್ತಿಪೂರ್ವಕವಾಗಿ ಉದ್ಘಾಟಿಸಿ, ಸಂಸ್ಥೆಯ ಸತ್ಕಾರ್ಯಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀವಿಠೋಬ ಭಜನಾ ಮಂದಿರದ ಗೌರವಾಧ್ಯಕ್ಷ  ಸದಾನಂದ ಎಮ್. ಶೆಟ್ಟಿ, ‘ಜನನಿ’ ಹೊಸಬೆಟ್ಟು ಇದರ ಸುಧಾಕರ್ ಎಸ್. ಪೂಂಜ, ಚಾಮುಂಡೇಶ್ವರಿ ಸನ್ನಿಧಿ ಪಂಜದ ಸೀತಾರಾಮ ಅಮೀನ್, ಶಿವಸಂಜೀವಿನಿ ಸುರ ಗಿರಿಯ ಅಧ್ಯಕ್ಷ ನವೀನ್ ಭಂಡಾರಿ, ಶ್ರೀ ಶನೈಶ್ಚರ ಮಂಡಳಿಯ ಅಧ್ಯಕ್ಷ  ಸುರೇಶ್ ಪಂಜ, ಹಾಗೂ ಹಾರ್ಮೋನಿಯಂ ಶಿಕ್ಷಕ ದಿನೇಶ್ ಎರ್ಮಾಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಉಪಯುಕ್ತವಾದ ಆರೋಗ್ಯ ವಿಮೆಯ ಬಗ್ಗೆ ಮಾಹಿತಿ ನೀಡಿದರು.
 ಶ್ರೀ ವಿಠೋಬ ಭಜನಾ ಮಂಡಳಿಯ ಅಧ್ಯಕ್ಷ ಭರತ್ ರಾಜ್ ಶೆಟ್ಟಿ  ಸ್ವಾಗತಿಸಿದರು.  ಭಜನಾ ಸಂಚಾಲಕ  ಸತೀಶ್ ಎಂ. ಶೆಟ್ಟಿ ಬೈಲಗುತ್ತು ಕಾರ್ಯಕ್ರಮ  ನಿರೂಪಿಸಿದರು. ಮಂಡಳಿಯ ಕೋಶಾಧಿಕಾರಿ ಪದ್ಮನಾಭ ಪೂಜಾರಿ ಧನ್ಯವಾದವಿತ್ತರು.
ಮಂಡಳಿಯ ಕಾರ್ಯದರ್ಶಿ ಅವಿನಾಶ್ ಶೆಟ್ಟಿ ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆದ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಊರಿನ ಸದ್ಭಕ್ತರು ಹಾಗೂ ಹಾರ್ಮೋನಿಯಂ ಕಲಿಯುವ ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಿವ ಸಂಜೀವಿನಿ ಸುರಗಿರಿಯ ಅಧ್ಯಕ್ಷ ನವೀನ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು