ಉದ್ಯಮಿಗಳಿಂದ ಪಂಜ ಶಾಲೆಗೆ ಗಣಕಯಂತ್ರದ ಕೊಡುಗೆ ಹಾಗೂ ದೇಣಿಗೆ ಹಸ್ತಾಂತರ
ಪಕ್ಷಿಕೆರೆ : ಸಾರ್ವಜನಿಕ ಶಿಕ್ಷಣ ಇಲಾಖೆ ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಂಜ ಮಂಗಳೂರು ಉತ್ತರ ವಲಯ ಇಲ್ಲಿನ ಸಭಾಂಗಣದಲ್ಲಿ ಜು. 3ರಂದು ಶಾಲೆಗೆ ಪಂಜ ಬಾಕಿಮಾರು ಗುತ್ತುವಿನ ಅಧ್ಯಕ್ಷ, ಉದ್ಯಮಿ ದಯಾನಂದ ಶೆಟ್ಟಿಯವರು ಗಣಕಯಂತ್ರ ಹಾಗೂ ಉದ್ಯಮಿ ಸದಾನಂದ ಶೆಟ್ಟಿ ಪಂಜ ಶಾಲೆಗೆ ದೇಣಿಗೆಯಾಗಿ 72 ಸಾವಿರ ನೀಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಪಂಜ, ಶಾಲಾ ಎಸ್ .ಡಿ .ಎಂ ಸಿ ಅಧ್ಯಕ್ಷ ನವೀನ್ ಸಾಲಿಯನ್ ಪಂಜ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್. ಎಂ .ಶೆಟ್ಟಿ ಬೈಲಗುತ್ತು, ಚಂದ್ರಹಾಸ ಶೆಟ್ಟಿ ಮೊಗಾಪಾಡಿ, ಗಣೇಶ್ ಶೆಟ್ಟಿ ಪಂಜ ಬಾಕಿಮಾರುಗುತ್ತು, ಅವಿನಾಶ್ ಶೆಟ್ಟಿ ಪಂಜ ಬಾಕಿ ಮಾರುಗುತ್ತು ,ಶಾಲಾ ಮುಖ್ಯ ಶಿಕ್ಷಕಿ ವಸಂತಿ. ಕೆ, ಸಹ ಶಿಕ್ಷಕಿ ಪಲ್ಲವಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.