Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕೆಮ್ರಾಲ್ ಗ್ರಾ.ಪಂ.-ಕಸದ ರಾಶಿಯಿಂದ ಇಂಧನದ ಬೆಳಕು-ಉತ್ಪಾದನಾ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ



ಪಕ್ಷಿಕೆರೆ :ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾದ  ಬಿ ಫೌಜಿಯಾ ತರನ್ನುಮ್ (IAS) ರವರು  ಕೆಮ್ರಾಲ್ ಪಂಚಾಯತ್ ನಲ್ಲಿರುವ ಒಣ ತ್ಯಾಜ್ಯ ಇಂಧನ ಪೆಲೆಟ್ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು 
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೊಡ ಉತ್ಪಾದನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತೆ  ಬಿ ಫೌಜಿಯಾ ತರನ್ನುಮ್ ಮಾಧ್ಯಮದ ಜೊತೆ
 ಮಾತನಾಡಿ ಕಸದಿಂದ ರಸ ಎಂಬ ಪರಿಕಲ್ಪನೆಯನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೆಮ್ರಾಲ್ ಗ್ರಾಮ ಪಂಚಾಯತಿ ವತಿಯಿಂದ ಒಣ ತ್ಯಾಜ್ಯದಿಂದ ಇಂಧನ ಪೆಲ್ಲೆಟ್ ಉತ್ಪಾದನಾ ಕೇಂದ್ರ ಯಶಸ್ವಿಯಾಗಿ ನಡೆಯುತ್ತಿರುವುದು ಪಂಚಾಯ್ತಿಯ ಅಭಿವೃದ್ಧಿಯ ಸಂಕೇತವಾಗಿದೆ ಎಂದರು
ಅವರು ಮಾತನಾಡಿ ಮರು ಉತ್ಪಾದನೆಗೆ ಯೋಗ್ಯವಲ್ಲದ ಹಾಗೂ ಮೌಲ್ಯ ರಹಿತ ತ್ಯಾಜ್ಯವೆಂದು ಪರಿಗಣಿಸಲ್ಪಟ್ಟಿರುವ ಒಣ ತಾಜ್ಯಗಳು ಕೈಗಾರಿಕೆಗಳ ಬ್ರಾಯ್ಲರ್ ಗಳಿಗೆ ಇಂಧನವಾಗಿ ಬಳಸುವ ಪೆಲ್ಲೆಟ್ ಗಳಾಗಿ ಪರಿವರ್ತನೆಯಾಗುತ್ತಿದೆ, ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಇದು ಮಹತ್ವದ ಮೈಲುಗಲ್ಲಾಗಲಿದೆ ಎಂದು ಹೇಳಿ ಇದಕ್ಕೆ ಕಾರಣಕರ್ತರಾದ ಪ್ರತಿಯೊಬ್ಬ ಅಧಿಕಾರಿ ಹಾಗೂ ಪಂಚಾಯತ್  ಶ್ರಮಿಕ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು
ಈ ಸಂದರ್ಭ ಕೆಮ್ರಾಲ್ ಗ್ರಾಪಂ.ಮಾಜೀ ಅಧ್ಯಕ್ಷ ಮಯ್ಯದ್ದಿ,ತಾ ಪಂ. ಕಾರ್ಯನಿರ್ವಣಾಧಿಕಾರಿ ಗುರುದತ್ ಎಂ ಎನ್, ಮಂಗಳೂರು ತಾಪಂ ಇಒ ಮಹೇಶ್ ಹೊಳ್ಳ, ಜಿ.ಪಂ ಇಂಜಿನಿಯರ್ ನಿತಿನ್, ಸ್ವಚ್ಛ ಭಾರತ ಮಷೀನ್ ಸಂಯೋಜಕರಾದ ಪವನ್, ನವೀನ್, ಕೆಮ್ರಾಲ್ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅರುಣ್ ಪಿ.ಡಿಸೋಜ, ಪಂಚಾಯತ್ ಕಾರ್ಯದರ್ಶಿ ಕೇಶವ ದೇವಾಡಿಗ ಪಂಚಾಯತ್ ಸಿಬ್ಬಂದಿಗಳು  ಮತ್ತಿತರರು ಉಪಸ್ಥಿತರಿದ್ದರು