Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಿಡ್ಡೋಡಿ ಶ್ರೀ ದುರ್ಗಾದೇವಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವನಮಹೋತ್ಸವ ಮತ್ತು ಹಸಿರು ದಿನಾಚರಣೆ

ನಿಡ್ಡೋಡಿ : ಇಲ್ಲಿನ ಜ್ಞಾನರತ್ನ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಅಧೀನದ ಶ್ರೀ ದುರ್ಗಾದೇವಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವನಮಹೋತ್ಸವ ಮತ್ತು ಹಸಿರು ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್ ನ  ಕಾರ್ಯದರ್ಶಿ ಶ್ರೀಮತಿ ಸಂಗೀತಾ ಭಾಸ್ಕರ್ ದೇವಸ್ಯ ಅವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ, ಪರಿಸರ ರಕ್ಷಣೆಯ ಸಂದೇಶ ನೀಡಿದರು.
ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳು ವನಮಹೋತ್ಸವದ ಕುರಿತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
 ಆಡಳಿತಾಧಿಕಾರಿ ಸಾಗರ್, ಪ್ರಾಂಶುಪಾಲೆ ಶ್ರೀಮತಿ ಅನುರಾಧಾ ಸಾಲಿಯಾನ್, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೀಮಾ,ಸಹ-ಮುಖ್ಯೋಪಾಧ್ಯಾಯಿನಿ ಕುಮಾರಿ ಜಯಶ್ರೀ  ಈ ಸಂದರ್ಭ ಉಪಸ್ಥಿತರಿದ್ದರು.