ಮುಲ್ಕಿ: ಚೆನ್ನಮ್ಮ ದೇವೇಗೌಡ ನಿಧನಕ್ಕೆ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸಂತಾಪ
ಮುಲ್ಕಿ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಧರ್ಮಪತ್ನಿ ಸರಳ ಸಜ್ಜನಿಕೆಯ ಚೆನ್ನಮ್ಮ ದೇವೇಗೌಡರವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ಅವರು ಮಾಧ್ಯಮದ ಜೊತೆ ಮಾತನಾಡಿ ಚೆನ್ನಮ್ಮ ದೇವೇಗೌಡರು ಪತಿಗೆ ಆದರ್ಶ ಗೃಹಿಣಿಯಾಗಿದ್ದರು. ಅವರ ಜೀವನ ಶೈಲಿ ಯುವ ಜನಾಂಗಕ್ಕೆ ಮಾದರಿ, ಎಂದು ಹೇಳಿದ್ದಾರೆ
ಜ್ಯೋತಿಷಿ ಉಷಾ ವಿಶ್ವನಾಥ ಭಟ್ ಎಸ್.ಕೋಡಿ ಮಾತನಾಡಿ ರಾಜಕೀಯ ಜಂಜಾಟದ ನಡುವೆಯೂ ಸರಳ ವ್ಯಕ್ತಿತ್ವದ ಚೆನ್ನಮ್ಮ ದೇವೇಗೌಡರ ಕುಟುಂಬ ತಮ್ಮ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ
ಚೆನ್ನಮ್ಮ ದೇವೇಗೌಡರ ನಿಧನಕ್ಕೆ ಶಾಸಕ ಉಮಾನಾಥ ಕೋಟ್ಯಾನ್,ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ಉದಯಕುಮಾರ್ ಶೆಟ್ಟಿ ಅಧಿಧನ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು , ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ,ಜೆಡಿಎಸ್ ನಾಯಕರಾದ ಇಕ್ಬಾಲ್ ಮುಲ್ಕಿ ,ನವೀನ್ ಪುತ್ರನ್
ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ