ಮುಲ್ಕಿ: ಜನೌಷಧಿ ಕೇಂದ್ರಕ್ಕೆ ಭಾನುವಾರ ರಜೆ-ಗ್ರಾಹಕರಿಗೆ ತೊಂದರೆ
ಮುಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡ್ ನಲ್ಲಿ ಕಾರ್ಯಾಚರಿಸುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಪ್ರತಿ ಭಾನುವಾರ ಮುಚ್ಚುಗಡೆಯಾಗಿ ಗ್ರಾಹಕರಿಗೆ ತೊಂದರೆಯಾಗುತ್ತಿದೆ
ಈ ಬಗ್ಗೆ ಅನೇಕ ಬಾರಿ ಸಂಬಂಧ ಪಟ್ಟ ಆಡಳಿತಕ್ಕೆ ಮನವಿ ಸಲ್ಲಿಸಿದರು ಇದುವರೆಗೂ ಭಾನುವಾರ ಔಷಧಿ ಕೇಂದ್ರ ತೆರೆಯುತ್ತಿಲ್ಲ
ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡ್ ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಔಷಧಿಗಳು ದೊರೆಯುತ್ತಿರುವ ಜನ ಔಷಧಿ ಕೇಂದ್ರ ಭಾನುವಾರವು ತೆರೆದಿರಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ
ಔಷಧಿ ಅಂಗಡಿಗಳಿಗೆ ರಜೆಯನ್ನುವ ಶಬ್ದವೇ ಇಲ್ಲ ಕರೋನಾ ದಿನಗಳಲ್ಲಿ ಪ್ರತಿ ದಿನವೂ ಔಷಧಿ ಅಂಗಡಿಗಳು ತೆರೆಯಲ್ಪಟ್ಟು ಜನರ ಸೇವೆಯನ್ನು ಮಾಡುತ್ತಿದ್ದರು ಆದರೆ ಈ ಜನೌಷಧಿ ಕೇಂದ್ರ ಮಾತ್ರ ಪ್ರತಿ ಭಾನುವಾರ ಮುಚ್ಚಲ್ಪಟ್ಟಿರುತ್ತದೆ
ಜನೌಷದಿ ಕೇಂದ್ರಗಳಲ್ಲಿ ಪ್ರಾಣಿಗಳ ಚಿಕಿತ್ಸೆಯ ಔಷಧಿ ಸಿಗಲಿ
ಮುಲ್ಕಿ ನಗರ ವ್ಯಾಪ್ತಿಯಲ್ಲಿ ಬೆಕ್ಕು ನಾಯಿ ದನ ಇನ್ನಿತರ ಸಾಕುಪ್ರಾಣಿಗಳಿಗೆ ಅವಘಡ ಸಂಭವಿಸಿದರೆ ಕಾರ್ನಾಡ್ ನಲ್ಲಿ ಕಾರ್ಯಾಚರಿಸುತ್ತಿರುವ ಪಶುವೈದ್ಯ ಆಸ್ಪತ್ರೆಗೆ ತೆರಳುತ್ತಾರೆ ಆದರೆ ಅಲ್ಲಿ ಆಸ್ಪತ್ರೆಯ ವೈದ್ಯರು ಚೀಟಿ ನೀಡಿ ಔಷಧಿಯ ಹೆಸರು ಬರೆದು ಮೆಡಿಕಲ್ ಅಂಗಡಿಯಲ್ಲಿ ತೆಗೆದುಕೊಳ್ಳಲು ಹೇಳುತ್ತಾರೆ
ಆದರೆ ಚೀಟಿ ಹಿಡಿದುಕೊಂಡು ಜನ ಔಷಧಿ ಕೇಂದ್ರಕ್ಕೆ ತೆರಳಿದರೆ ಅಲ್ಲಿ ಪ್ರಾಣಿಗಳ ಚಿಕಿತ್ಸೆಯ ಮದ್ದು ಇರುವುದಿಲ್ಲ. ಬಳಿಕ ದುಬಾರಿ ಬೆಲೆ ತೆತ್ತು ಖಾಸಗಿ ಮೆಡಿಕಲ್ ಅಂಗಡಿಯಲ್ಲಿ ಔಷಧಿ ಪಡೆಯಬೇಕಾದ ಪರಿಸ್ಥಿತಿ ಇದೆ. ಕೂಡಲೇ ಕೇಂದ್ರ ಸರಕಾರ ಈ ಬಗ್ಗೆ ಗಮನ ಹರಿಸಿ ಜನ ಔಷಧಿ ಕೇಂದ್ರದಲ್ಲಿ ಪ್ರಾಣಿಗಳ ಚಿಕಿತ್ಸೆಗೆ ಔಷಧಿ ನೀಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ