ಸುರಿದ ಭಾರೀ ಮಳೆಗೆ ಮೂಲ್ಕಿಯ ಕೆಎಸ್ ರಾವ್ ನಗರ ಸಮೀಪ ತಡೆಗೋಡೆ ಕುಸಿತ,ಆಪಾರ ನಷ್ಟ
ಮುಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆಯಿಂದಲೇ ಭಾರೀ ಮಳೆಯಾಗುತ್ತಿದ್ದು,ಭಾರೀ ಮಳೆಗೆ ಸುಮಾರು 14 ವರ್ಷಗಳ ಇತಿಹಾಸದ ಕೆಎಸ್ ರಾವ್ ನಗರ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೋನಿಯ ಶ್ರೀ ಚೆನ್ನ ಮಲ್ಲಿಕಾರ್ಜುನ ಮಠದ ಆವರಣ ಗೋಡೆ ಕುಸಿದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಹಾಗೂ ಸಮೀಪದಲ್ಲಿ ರುವ ನೀರಿನ ಟ್ಯಾಂಕ್ ಕುಸಿತದ ಭೀತಿ ಎದುರಿಸುತ್ತಿದೆ
ಸ್ಥಳಕ್ಕೆ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್, ಮಾಜೀ ಸದಸ್ಯ ಭೀಮಾಶಂಕರ್, ಮಠದ ಅಧ್ಯಕ್ಷ ವಿಠಲ್ ಎನ್ ಎಂ, ಪದಾಧಿಕಾರಿಗಳಾದ ಶಿವಾನಂದ ಆರ್ ಕೆ ನಂಜುಂಡ ಆರ್.ಕೆ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಭಾರೀ ಮಳೆಗೆ ಭಾರಿ ಮಳೆಗೆ ಹಳೆಯಂಗಡಿ ಸಮೀಪದ , ತೋಕೂರು ಪರಿಸರದಲ್ಲಿ ಗದ್ದೆಗಳು ಜಲಾವೃತವಾಗಿದ್ದು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ- ಲೈಟ್ ಹೌಸ್
ಸಂಪರ್ಕಿಸುವ ರಸ್ತೆಗೆ ನೀರು ನುಗ್ಗಿ ವಾಹನ ಸಂಚಾರ ವ್ಯತ್ಯಯ ಉಂಟಾಯಿತು ಭಾರೀ ಮಳೆಗೆ ತಾಲೂಕು ವ್ಯಾಪ್ತಿಯ ಶಿಮಂತೂರು ಕೆಂಪುಗುಡ್ಡೆ ಮಾನಂಪಾಡಿ,ಪಕ್ಷಿಕೆರೆ,ಕಿನ್ನಿಗೋಳಿ,ಹಳೆಯಂಗಡಿ ಪರಿಸರದಲ್ಲಿ ಕೂಡ ಕೃತಕ ನೆರೆ ಉಂಟಾಗಿ ಸಣ್ಣಪುಟ್ಟ ಅನಾಹುತಗಳು ಸಂಭವಿಸಿದೆ
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆ ಹಾಗೂ ಗಾಳಿ ಬೀಸುವ ಲಕ್ಷಣವಿದ್ದು. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಮುಲ್ಕಿ ತಹಶಿಲ್ದಾರ್ ಸೂಚನೆ ನೀಡಿದ್ದಾರೆ.