Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪುನರೂರು: ವಿದ್ಯಾರ್ಥಿಗಳು ಶೈಕ್ಷಣಿಕ ಸಾಧಕರಾಗಬೇಕು-ಸುರೇಶ್ ರಾವ್ ನೀರಳಿಕೆ

ಮುಲ್ಕಿ: ಪುನರೂರು ಸೇವಾನಿಧಿ ಟ್ರಸ್ಟ್ ವತಿಯಿಂದ ಪುನರೂರು ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಪ್ರಾಂಗಣದಲ್ಲಿ ನಡೆದ ಸಭೆಯಲ್ಲಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡಲಾಯಿತು. ಸೇವಾನಿಧಿ ಟ್ರಸ್ಟ್ ನ ಟ್ರಸ್ಟಿ ಸುರೇಶ್ ರಾವ್ ನೀರಳಿಕೆ ಮಾತನಾಡಿ ವಿದ್ಯಾರ್ಥಿಗಳು ಸಹಾಯ ಹಸ್ತವನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಸಾಧಕರಾಗಬೇಕು ಎಂದರು
ಶಿಮಂತೂರು ಶ್ರೀ ಶಾರದಾ ಮಾದರಿ ಶಾಲೆಯ ವಿದ್ಯಾರ್ಥಿ ಗಳಾದ
.ಮೋಕ್ಷ ವೆಂಕಟೇಶ್ ಕೆಮ್ರಾಲ್,ಕೃಷ್ಣ ಪ್ರಸಾದ್ ವೆಂಕಟೇಶ್ ರಾವ್ ಏಳತ್ತೂರು,.ವೈಷ್ಣವಿ ನಾರಾಯಣ ನಾಯ್ಕ್, 
ಅಭಿಕ್ಷಾ ಗಣೇಶ್ ಕೋಟ್ಯಾನ್, ಪ್ರತೀಕ್ ದಾಮೋದರ ಶೆಟ್ಟಿಗಾರ್ ಕುಜಿಂಗಿರಿ
ಹಾಗೂ ತಿಶಾನ್ ದಿನೇಶ್ ಪುನರೂರು ರವರಿಗೆ ಸುಮಾರು  60 ಸಾವಿರದ ಚೆಕ್ಕುಗಳನ್ನು ಹಸ್ತಾಂತರಿಸಲಾಯಿತು.
ಸೇವಾನಿಧಿ ಟ್ರಸ್ಟ್ ನ ಟ್ರಸ್ಟಿಗಳಾದ ರವಿ ಶೆಟ್ಟಿ ಪುನರೂರುಗುತ್ತು , ರಾಕೇಶ್ ಕೊರಗಪ್ಪ ಪುನರೂರು, ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಎರಡನೇ ಗುರಿಕಾರ ದಾಸು ಪುನರೂರು ಹಾಗೂ  ಸದಸ್ಯರು ಉಪಸ್ಥಿತರಿದ್ದರು.