Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಪರಿಸರ ಸಂರಕ್ಷಣೆಯಿಂದ ಉತ್ತಮ ಆರೋಗ್ಯ ಸಾಧ್ಯ-ಪ್ರವೀಣ್ ಶೆಟ್ಟಿ

ಮುಲ್ಕಿ:ಲಯನ್ಸ್ ಕ್ಲಬ್ ಹಾಗೂ ಕೆರೆಕಾಡು ಬೆಳ್ಳಾಯರು ಸಾರ್ವಜನಿಕ ಹಿಂದೂ ರುದ್ರ ಭೂಮಿ  ಸಮಿತಿಯ ಜಂಟಿ ಆಶ್ರಯದಲ್ಲಿ ಕೆರೆಕಾಡು ಹಿಂದೂ ರುದ್ರಭೂಮಿ ವಠಾರದಲ್ಲಿ "ವನಮಹೋತ್ಸವ"ಕಾರ್ಯಕ್ರಮ  ನಡೆಯಿತು
 ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ  ಪರಿಸರ ಸಂರಕ್ಷಣೆಯಿಂದ  ಉತ್ತಮ ಆರೋಗ್ಯ ಸಾಧ್ಯ, ಕಾಡು ಬೆಳೆಸಿ ನಾಡು ಉಳಿಸಲು ನಾವು ಪ್ರಯತ್ನ ಪಡಬೇಕಾಗಿದೆ ಎಂದರು
ಈ ಸಂದರ್ಭದಲ್ಲಿ ಮುಲ್ಕಿ ಲಯನ್ಸ್ ಕ್ಲಬ್ ನ  ಕಾರ್ಯದರ್ಶಿ ಉದಯ ಅಮೀನ್, ಕೋಶಧಿಕಾರಿ ಸದಾಶಿವ ಹೊಸದುರ್ಗ, ಸದಸ್ಯರುಗಳಾದ ಶೀತಲ್ ಸುಶೀಲ್, ವಿನೋದ್ ಸಾಲ್ಯಾನ್, ಸುಶೀಲ್ ಬಂಗೇರ, ಪ್ರಶಾಂತ್ ಶೆಟ್ಟಿ, ನಿರೂಪಮ ಶೆಟ್ಟಿ, ಸಾರ್ವಜನಿಕ ಹಿಂದೂ ರುದ್ರ ಭೂಮಿ ಸಮಿತಿಯ ಅಧ್ಯಕ್ಷರು ಲಕ್ಷ್ಮಣ್ ಸಾಲ್ಯಾನ್, ಕಾರ್ಯದರ್ಶಿ ಮಾಧವ ಶೆಟ್ಟಿಗಾರ್, ಕೋಶಧಿಕಾರಿ ಪಿ ಆರ್ ರಾಜೇಶ್, ಸದಸ್ಯರುಗಳಾದ ಶ್ರೀನಿವಾಸ್ ಆಚಾರ್ಯ, ದಿವ್ಯೆಶ್  ದೇವಾಡಿಗ, ಪ್ರಶಾಂತ್ ಆಚಾರ್ಯ, ಕರುಣಾಕರ ಕುಂದರ್, ಹಾಗೂ ದೊಂಬಯ್ಯ ಶೆಟ್ಟಿಗಾರ್, ಈಶ್ವರ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.