Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಕೊಲಕಾಡಿ ಶ್ರೀ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ವಿಜೃಂಭಣೆಯ ಗುರು ಪೂರ್ಣಿಮ ಮಹೋತ್ಸವ

ಮುಲ್ಕಿ:  ಕೊಲಕಾಡಿ ಶ್ರೀ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ  ವೇದಮೂರ್ತಿ  ವಾದಿರಾಜ ಉಪಾಧ್ಯಾಯ ಕುಂಜಾರಗಿರಿಯವರ ಮಾರ್ಗದರ್ಶನದಲ್ಲಿ
ಗುರು ಪೂರ್ಣಿಮ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು
ಬುಧವಾರ ಬೆಳಿಗ್ಗೆ ಕ್ಷೇತ್ರದ ಅರ್ಚಕ ಪ್ರದೀಪ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು
ಬೆಳಿಗ್ಗೆ ಕಾಕಡ ಆರತಿ, ಭಜನಾ ಕಾರ್ಯಕ್ರಮ, ನಡೆಯಿತು
ಭಜನಾ ಕಾರ್ಯಕ್ರಮವನ್ನು
ಕ್ಷೇತ್ರದ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಧರ ಕೋಟ್ಯಾನ್ ದೀಪ ಬೆಳಗಿಸಿ ಚಾಲನೆ ನೀಡಿದರು 
ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಗುರುಪಾದುಕ ಪೂಜೆಮಧ್ಯಾಹ್ನ ಮಹಾ ಮಂಗಳಾರತಿ ,ಮಹಾ ಅನ್ನಸಂತರ್ಪಣೆ, ಸಂಜೆ   ಧೂಪಾರತಿ, ಮಹಾಮಂಗಳಾರತಿ, ರಾತ್ರಿ  ಪ್ರಸಾದ ವಿತರಣೆ ಹಾಗೂ
ಭಾಸ್ಕರ ಕಾಂಚನ್ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು
 ಈ ಸಂದರ್ಭ ಕ್ಷೇತ್ರದ ಗೌರವಾಧ್ಯಕ್ಷ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಅಧ್ಯಕ್ಷ ಈಶ್ವರ ಎಲ್ ಶೆಟ್ಟಿ ಮುನ್ನಾಲಯ ಗುತ್ತು ಬಂಟ್ವಾಳ,  ಕೋಶಾಧಿಕಾರಿ ರಂಗನಾಥ ಶೆಟ್ಟಿ ಅತಿಕಾರಿಬೆಟ್ಟು,ಪಡು ಪಣಂಬೂರು  ಗ್ರಾ. ಪಂ ಮಾಜೀ ಅಧ್ಯಕ್ಷರುಗಳಾದ ಮನೋಹರ ಕೋಟ್ಯಾನ್ , ವಿನೋದ್ ಸಾಲ್ಯಾನ್ ಬೆಳ್ಳಾಯರು,ಜಯಶ್ರೀ ಶ್ರೀಧರ ಕೋಟ್ಯಾನ್,ಗುಣಪಾಲ ಬಂಗೇರ, ಯೋಗಾನಂದ ಶೆಟ್ಟಿಗಾರ್, ಧನಂಜಯ ದೇವಾಡಿಗ,ಚೇತನ್ ಶೆಟ್ಟಿಗಾರ್,
ಮತ್ತಿತರರು ಉಪಸ್ಥಿತರಿದ್ದರು