Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪತ್ರಕರ್ತ ಹಾಗೂ ರಂಗಕರ್ಮಿ ದಿ. ಪರಮಾನಂದ ಸಾಲ್ಯಾನ್ ರವರಿಗೆ ಶ್ರದ್ಧಾಂಜಲಿ ಸಭೆ

ಮುಲ್ಕಿ: ಮುಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಪತ್ರಕರ್ತ ಹಾಗೂ ರಂಗಕರ್ಮಿ ದಿ. ಪರಮಾನಂದ ಸಾಲ್ಯಾನ್ ರವರಿಗೆ ಶ್ರದ್ಧಾಂಜಲಿ ಸಭೆ  ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಗುರುವಾರ ನಡೆಯಿತು 
ಸಭೆಯಲ್ಲಿ ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಮಾತನಾಡಿ  ದಿ. ಪರಮಾನಂದ ಸಾಲ್ಯಾನ್ ರವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಉಳ್ಳವರಾಗಿದ್ದರು. ಕಲಾಪೋಷಕರಾಗಿ , ಪತ್ರಕರ್ತರಾಗಿ, ಅವರ ಸಾಧನೆಗಳು ಅಪಾರ. ಸಮಾಜಕ್ಕೆ ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಹೇಳಿದರು 
ನಿವೃತ್ತ ಉಪನ್ಯಾಸಕ ಡಾ. ವಿ ಕೆ ಯಾದವ್ ಸಸಿಹಿತ್ಲು ಮಾತನಾಡಿ ದಿ. ಪರಮಾನಂದ ಸಾಲ್ಯಾನ್ ರವರು ವಿದ್ಯಾರ್ಥಿಯಾಗಿರುವಾಗಲೇ ಚಿಮ್ಮುತ್ತಿರುವ ಪ್ರತಿಭೆಯಾಗಿದ್ದರು ಖ್ಯಾತ ವಾಗ್ಮಿಯಾಗಿ, ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ನಾಟಕ ರಚನೆಕಾರರಾಗಿ, ರಂಗ ಸುದರ್ಶನ ಸಂಸ್ಥೆಯನ್ನು ನಡೆಸಿಕೊಂಡು ಸಾಧಕರಾಗಿದ್ದರು ಎಂದರು
ತುಳು ವರ್ಲ್ಡ್ ಫೌಂಡೇಶನ್ ಕಟೀಲು ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಮಾತನಾಡಿ ಪ್ರತಿಯೊಂದು ರಂಗದಲ್ಲಿ ನಿಸ್ವಾರ್ಥ ಸೇವೆ ಮೂಲಕ ದಿ. ಸಾಲ್ಯಾನ್ ರವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ತುಳುವಿಗೆ ಅವರ ಪ್ರೋತ್ಸಾಹ ಅನುಕರಣೀಯವಾಗಿತ್ತು
ಅವರ ಆಗಲುವಿಕೆ ತುಳುನಾಡಿಗೆ ತುಂಬಲಾರದ ನಷ್ಟ ಎಂದರು 
  ಮುಲ್ಕಿ ನಗರ ಪಂಚಾಯತಿ ನಿವೃತ್ತ ಮುಖ್ಯಾಧಿಕಾರಿ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್ ಮಾತನಾಡಿ ದಿ. ಸಾಲ್ಯಾನ್ ರವರು ಪತ್ರಿಕಾ,ಸಾಹಿತ್ಯ ರಂಗದಲ್ಲಿ ಸೇವೆ ಅದ್ಭುತವಾಗಿತ್ತು, ಎಂದರು
ಹೆಜಮಾಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜ್ಮಾಡಿ ಮಾತನಾಡಿ ದಿ. ಸಾಲ್ಯಾನ್ ರವರು ಬಾಲ್ಯದಲ್ಲಿ ಬಹುಮುಖ ಪ್ರತಿಭೆಯ ಮೂಲಕ ಅವರ ಸಾಧನೆಗಳು ಅಪಾರ. ಯುವ ಜನಾಂಗಕ್ಕೆ ಅವರ ವ್ಯಕ್ತಿತ್ವ ಮಾದರಿ ಎಂದರು.
ಸಭೆಯಲ್ಲಿ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ,ಮುಲ್ಕಿ ನ.ಪಂ ಮಾಜೀ ಸದಸ್ಯರಾದ ಹರ್ಷರಾಜ ಶೆಟ್ಟಿ,,ಪತ್ರಕರ್ತ ಯಶೋಧರ ಕೋಟ್ಯಾನ್ ,ಸಾಧು ಅಂಚನ್ ಮಟ್ಟು,ಮುಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಸುರತ್ಕಲ್ ನುಡಿ ನಮನ ಸಲ್ಲಿಸಿದರು
ಸಭೆಯಲ್ಲಿ ಮಾಜೀ ನ.ಪಂ.ಅಧ್ಯಕ್ಷೆ ಸರೋಜಿನಿ ಸುವರ್ಣ,, ಮಾಜೀ ಸದಸ್ಯ ಉಮೇಶ್ ಮಾನಂಪಾಡಿ, ಎಸ್.ಆರ್ ಪ್ರದೀಪ್ ಸಸಿಹಿತ್ಲು,ಮುಲ್ಕಿ ಬಿಲ್ಲವ ಸಂಘದ ಮಾಜೀ ಅಧ್ಯಕ್ಷ ಗೋಪಿನಾಥ ಪಡಂಗ, ಲತಾ ಶೇಖರ್, ವಕೀಲ ರವೀಶ್ ಕಾಮತ್,  ಧರ್ಮಾನಂದ ಶೆಟ್ಟಿಗಾರ್,ಭರತೇಶ ಅಮೀನ್ ಮಟ್ಟು, ಮುಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪುನೀತ ಕೃಷ್ಣ  ಮತ್ತಿತರರು ಉಪಸ್ಥಿತರಿದ್ದರು 
ಪತ್ರಕರ್ತ ಮಿಥುನ್ ಕೊಡೆತ್ತೂರು ನಿರೂಪಿಸಿದರು
ಬಳಿಕ ದಿ. ಪರಮಾನಂದ ಸಾಲ್ಯಾನ್ ನಿಧನಕ್ಕೆ ಮೌನ ಪ್ರಾರ್ಥನೆ ನಡೆದು ಅವರ
 ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.