Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ರಸ್ತೆಯಲ್ಲಿ ಮಾರಣಾಂತಿಕ ಹೊಂಡ -ಪ್ರತಿಭಟನೆಗೆ ಎಚ್ಚೆತ್ತ ಆಡಳಿತ; ತಾತ್ಕಾಲಿಕ ದುರಸ್ತಿ

ಮುಲ್ಕಿ:ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಮುಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಹೆದ್ದಾರಿ ರಸ್ತೆಯಲ್ಲಿ ಮಾರಣಾಂತಿಕ  ಹೊಂಡಗಳಿಂದ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ ಎಂದು ಸ್ಥಳೀಯ ಆಟೋ ಚಾಲಕರು ಹಾಗೂ ಗ್ರಾಮಸ್ಥರು ಸೇರಿ ಅಪಾಯಕಾರಿ ಹೊಂಡಕ್ಕೆ ಬಾಳಗಿಡ ನೆಟ್ಟು ಪ್ರತಿಭಟನೆ  ನಡೆಸಿದ್ದು ಕೂಡಲೇ ಎಚ್ಚೆತ್ತ ಮುಲ್ಕಿ ನಗರ ಪಂಚಾಯತ್ ಆಡಳಿತ ರಸ್ತೆ ಹೊಂಡವನ್ನು ತಾತ್ಕಾಲಿಕವಾಗಿ ಮುಚ್ಚಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ 
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಮಾತನಾಡಿ  ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಲೋಕೋಪಯೋಗಿ ಇಲಾಖೆಗೆ ಸೇರಿದ್ದು,ಕಳೆದ ಹಲವಾರು ವರ್ಷಗಳಿಂದ ಡಾಮರು ಕಾಣದೆ ಕಂಗಾಲಾಗಿ ಹೋಗಿದೆ. ಈ ನಡುವೆ ಹೆದ್ದಾರಿ ಬದಿ ಹಾಗೂ ಹೆದ್ದಾರಿ ತುಂಡರಿಸಿ ಅಮೃತ್ 2.0ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಅವೈಜ್ಞಾನಿಕವಾಗಿ  ನಡೆದಿದ್ದು ವಾಹನ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿ  ಅಪಘಾತಗಳು ಸಂಭವಿಸಿ ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ.
 ಮುಲ್ಕಿ ವಿಜಯ ಸನ್ನಿಧಿ,ಕಾರ್ನಾಡ್,ಗೇರುಕಟ್ಟೆ,ಕುಬೆವೂರು,, ಕೆಂಚನಕೆರೆ ಅಂಗರಗುಡ್ಡೆ, ಕೆರೆಕಾಡು, ಹೊಸ ಕಾವೇರಿ, ಪದ್ಮನೂರು, ಬಲವಿನ ಗುಡ್ಡೆ,ಕಿನ್ನಿಗೋಳಿ ಹೆದ್ದಾರಿಯಲ್ಲಿ ಮಾರಣಾಂತಿಕ ಹೋಂಡಗಳಿಂದ ಜನ ಹಾಗೂ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ 
ಕೂಡಲೇ ರಸ್ತೆ ದುರಸ್ತಿಗೊಳಿಸಿ, ಇಲ್ಲದಿದ್ದರೆ ಪ್ರತಿಭಟನೆ ಎದುರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ