ಮುಲ್ಕಿ: ಭಾರೀ ಮಳೆ; ದೇವಸ್ಥಾನಕ್ಕೆ ನುಗ್ಗಿದ ಮಳೆ ನೀರು-ಜನಜೀವನ ಅಸ್ತವ್ಯಸ್ತ
ಮುಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಭಾರೀ ಮಳೆಯಾಗಿದ್ದು ಕೆಲ ಕಡೆ ಕೃತಕ ನೆರೆ ಉಂಟಾಗಿ ವಾಹನ ಸಂಚಾರ ವ್ಯತ್ಯಯ ಹಾಗೂ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಗೆ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಒಳಗಡೆ ಮಳೆ ನೀರು ನುಗ್ಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ತೀವ್ರ ತೊಂದರೆಯಾಯಿತು
ಶುಕ್ರವಾರ ದೇವಸ್ಥಾನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು ಮಳೆ ನೀರಿನಲ್ಲಿ ಭಕ್ತರು ಶ್ರೀ ದೇವರ ದರ್ಶನ ಪಡೆದರು
ದೇವಸ್ಥಾನದ ಆಡಳಿತ ಮಂಡಳಿ ತುರ್ತು ಕ್ರಮ ಕೈಗೊಂಡು ಪಂಪ್ ಮೂಲಕ ಮಳೆ ನೀರನ್ನು ತೆರವುಗೊಳಿಸಲಾಯಿತು
ತಾಲೂಕು ವ್ಯಾಪ್ತಿಯ ಹಳೆಯಂಗಡಿ, ತೋಕೂರು ಪರಿಸರದಲ್ಲಿ ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಲೈಟ್ ಹೌಸ್, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಂಪರ್ಕಿಸುವ ರಸ್ತೆ ,ಶಿಮಂತೂರು ದೇವಸ್ಥಾನ ರಸ್ತೆ -ಗದ್ದೆಗಳು ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡಬೇಕಾಯಿತು.
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ 1666.3 ಸೆ .ಮೀ. ಅತ್ಯಧಿಕ ಮಳೆಯಾಗಿದೆ
ಭಾರೀ ಮಳೆ ಗಾಳಿಗೆ ಗ್ರಾಮೀಣ ಪ್ರದೇಶದ ಮುಲ್ಕಿ,ಶಿಮಂತೂರು,ಕುಬೆವೂರು ,ಬಳ್ಕುಂಜೆ,ಕಿನ್ನಿಗೋಳಿ, ವಿದ್ಯುತ್ ವ್ಯತ್ಯಯ ಉಂಟಾಯಿತು.