Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ನಾದಸ್ವರದ ಸಂಗೀತವು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.- ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ

ಮುಲ್ಕಿ:ನಾದಸ್ವರದ ಸಂಗೀತವು ಶುಭದ ಸಂಕೇತವಾಗಿದ್ದು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.ಎಂದು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಅಂತರಾಷ್ಟ್ರೀಯ ವಾಸ್ತು ತಜ್ಞ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು
ಅವರು ಮುಲ್ಕಿಯ ಕಿಲ್ಪಾಡಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಖ್ಯಾತ ನಾಗಸ್ವರ ವಾದಕ ನಾಗೇಶ್ ಬಪ್ಪನಾಡು ರವರನ್ನು ತಮ್ಮ ಆಶ್ರಮದ ವತಿಯಿಂದ  ಸನ್ಮಾನಿಸಿ ಮಾತನಾಡಿ
ನಾದಸ್ವರವು ಭಾರತದ ಅತ್ಯಂತ ಪುರಾತನ ಮತ್ತು ಪವಿತ್ರವಾದ ಸಂಗೀತ ವಾದ್ಯಗಳಲ್ಲಿ ಒಂದಾಗಿದೆ. ಇದು ತನ್ನ ಗಂಭೀರ ಮತ್ತು ಮಧುರ ನಾದದಿಂದ ಎಲ್ಲರ ಮನಸ್ಸನ್ನು ಸೆಳೆಯುತ್ತದೆ. ದೇವಾಲಯಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಹಾಗೂ ಧಾರ್ಮಿಕ ಉತ್ಸವಗಳಲ್ಲಿ ನಾದಸ್ವರಕ್ಕೆ ವಿಶೇಷ ಸ್ಥಾನವಿದೆ.  ನಾವು ನಮ್ಮ ಸಾಂಪ್ರದಾಯಿಕ ಸಂಗೀತ ಮತ್ತು ವಾದ್ಯಗಳನ್ನು ಗೌರವಿಸಿ, ಮುಂದಿನ ಪೀಳಿಗೆಗೂ ಪರಿಚಯಿಸಬೇಕಾಗಿದೆ ಎಂದರು
ಗೌರವ ಸನ್ಮಾನ ಸ್ವೀಕರಿಸಿ ನಾಗೇಶ್ ಬಪ್ಪನಾಡು ರವರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರನ್ನು ಸಾಧಕರ ನೆಲೆಯಲ್ಲಿ ಗೌರವಿಸಿ ಮಾತನಾಡಿ ಆಧ್ಯಾತ್ಮಿಕ ವಿಶ್ವ ಗುರುಗಳಾಗಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ  ಆಶ್ರಮದ ವತಿಯಿಂದ ನಡೆಯುತ್ತಿರುವ  ಸಾಧಕರಿಗೆ ಗೌರವ,ಸೇವಾ ಕಾರ್ಯಕ್ರಮಗಳು ಹಾಗೂ  ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ದೊರಕಿಸಲು ನಡೆಯುತ್ತಿರುವ ಪ್ರಯತ್ನ ಅಭಿನಂದನೀಯ 
ಸ್ವಾಮೀಜಿಯವರ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು
ಮುಖ್ಯ ಅತಿಥಿಗಳಾಗಿ ಖ್ಯಾತ ಜ್ಯೋತಿಷಿ ವಿಶ್ವನಾಥ ಭಟ್, 
ರಂಗಕರ್ಮಿ ಚಂದ್ರಶೇಖರ ಸುವರ್ಣ, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಪುನೀತ ಕೃಷ್ಣ, ಶರತ್ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು 
ಪುನೀತ್ ಕೃಷ್ಣ ಸ್ವಾಗತಿಸಿದರು ಶರತ್ ಕಾರ್ನಾಡ್ ಧನ್ಯವಾದ ಅರ್ಪಿಸಿ ನಿರೂಪಿಸಿದರು