ಮುಲ್ಕಿ: ಪಂಚಮಹಲ್ ಬಳಿ ರಾಜ ಕಾಲುವೆ ತಡೆಗೋಡೆ ಕುಸಿತ -ಅಪಾಯದಲ್ಲಿ ಅರ್ಚಕರ ಮನೆ
ಮುಲ್ಕಿ: ನಗರ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದ ಬದಿಯಲ್ಲಿರುವ ರಾಜ ಕಾಲುವೆಯ ತಡೆಗೋಡೆ ಕುಸಿದು ಸಹಾಯಕ ಅರ್ಚಕರ ಮನೆ ಅಪಾಯದಲ್ಲಿದೆ
ಮುಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದ ಸಹಾಯಕ ಅರ್ಚಕ ರಮೇಶ್ ರಾವ್ ಕುಟುಂಬ ದೇವಸ್ಥಾನಕ್ಕೆ ತಾಗಿಕೊಂಡಿರುವ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು ಮನೆಯ ಬದಿಯಲ್ಲಿ ರಾಜ ಕಾಲುವೆ ಹರಿಯುತ್ತಿದೆ
ಮುಲ್ಕಿ ಪರಿಸರದ ಮಳೆ ನೀರು ಸಹಿತ ತ್ಯಾಜ್ಯ ನೀರು ರಾಜ ಕಾಲುವೆಯಲ್ಲಿ ಹರಿಯುತ್ತಿದ್ದು ಮಂಗಳವಾರ ಸುರಿದ ಭಾರೀ ಮಳೆಗೆ ರಾಜಾ ಕಾಲುವೆಯ ತಡೆಗೋಡೆ ಕುಸಿದಿದೆ, ಈ ಸಂದರ್ಭ ಸಹಾಯಕ ಅರ್ಚಕರ ಮನೆಯ ಕೆಳಭಾಗದ ಅಡಿಗಲ್ಲು ಕೂಡ ಕುಸಿದಿದ್ದು ಮನೆ ಅಪಾಯದಲ್ಲಿದೆ.
ಈ ಬಗ್ಗೆ ರಮೇಶ್ ರಾವ್ ಮಾತನಾಡಿ ಪ್ರತಿ ಬಾರಿ ಮಳೆಗಾಲದಲ್ಲಿ ರಾಜ ಕಾಲು ಇಲ್ಲಿ ಕಸ ಕಟ್ಟಿ ಸಿಲುಕಿ ಪರಿಸರದಲ್ಲಿ ಕೃತಕ ನೆರೆ ಉಂಟಾಗುತ್ತಿದೆ. ಈ ಬಾರಿ ತಡೆಗೋಡೆ ಬಿದ್ದು ಮನೆ ಕೂಡ ಕುಸಿಯುವ ಭೀತಿಯಲ್ಲಿದೆ
ಕೂಡಲೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿ ಪಡಿಸಬೇಕು ಹಾಗೂ ಮಳೆಗಾಲದಲ್ಲಿ ದುರಸ್ತಿ ಪಡಿಸಲು ಕಷ್ಟ ಸಾಧ್ಯವಿದ್ದ ಕಾರಣ ಮರಳಿನ ಚೀಲಗಳನ್ನು ಇರಿಸಿ ಮತ್ತಷ್ಟು ಕುಸಿತ ತಡೆಯಬೇಕು ಎಂದು
ಒತ್ತಾಯಿಸಿದ್ದಾರೆ
ಸ್ಥಳಕ್ಕೆ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮಧುಕರ್ , ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.