Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ತುಳುನಾಡಿನಲ್ಲಿ ಆಟಿ ತಿಂಗಳು ಆರೋಗ್ಯ ರಕ್ಷಣೆ ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೆ ಮಹತ್ವದ್ದಾಗಿದೆ. ಗುರುದತ್

ಮುಲ್ಕಿ:ತುಳುನಾಡಿನ ಸಂಪ್ರದಾಯದಲ್ಲಿ ಆಟಿ ತಿಂಗಳು ಎಂದರೆ ಮಳೆಗಾಲದ ಪವಿತ್ರ ತಿಂಗಳು, ಈ ತಿಂಗಳಲ್ಲಿ ಯಾವುದೇ ಶುಭಕಾರ್ಯಗಳು ನಡೆಯದಿದ್ದರೂ ಆರೋಗ್ಯ ರಕ್ಷಣೆ ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೆ ಮಹತ್ವದ್ದಾಗಿದೆ. 
ತುಳುನಾಡಿನ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಒಗ್ಗಟ್ಟಿನ ಮೂಲಕ ಆಚರಿಸಿ ಸಾಮಾಜಿಕ ಕಳಕಳಿ ಬಿಂಬಿಸುತ್ತಿರುವ ಒಕ್ಕೂಟದ ಕಾರ್ಯ ಅಭಿನಂದನೀಯ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರು ದತ್ ಹೇಳಿದರು 
ಅವರು ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ  ಶಾಲೆಯ ಸಭಾಭವನದಲ್ಲಿ ನಡೆದ ಕಿಲ್ಪಾಡಿ ದುರ್ಗಾಪರಮೇಶ್ವರಿ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ, ಮಾಸಿಕ ಸಂತೆ ಹಾಗೂ ಆಟಿ ಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು
  ಸಂಪನ್ಮೂಲ ವ್ಯಕ್ತಿ ಯಾಗಿ  ಮಹೇಶಕುಮಾರ್  ಆಟಿಯ  ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು 
ಮುಖ್ಯ ಅತಿಥಿಗಳಾಗಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಪೂರ್ಣಿಮಾ ಪಂಚಾಯತ್  ಮಾಜೀ ಉಪಾಧ್ಯಕ್ಷ ಗೋಪಿನಾಥ್ ಪಡಂಗ,ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷೆ  ಪ್ರಜ್ವತ  ಟಿಪಿಎಂ ನಿಖಿಲ್, ತಾಲೂಕು ಪಿ ಆರ್ ಐ ಮಂಜುಳಾ, ಪಿ ಆರ್ ಐ ಇ ಪಿ ಶ್ವೇತ,, ಅಶ್ಮಿತಾ,ಲತೀಶ್  ಮತ್ತಿತರರು  ಉಪಸ್ಥಿತರಿದ್ದರು
ಒಕ್ಕೂಟದ ಕೃಷಿ ಸಖಿ, ಪಶು ಸಖಿ. ಹೇಮಲತಾ  ಪ್ರೀತಿಕಾ ಡಿ. ಅಮೀನ್ ನಿರೂಪಿಸಿದರು 
ಒಕ್ಕೂಟದ ಮಹಿಳೆಯರು ಆಟಿಯ ತಿಂಗಳ ವಿವಿಧ ಉತ್ಪನ್ನಗಳನ್ನು ತಂದು ಆಟಿ ದ ಕೂಟ ವನ್ನು ಬೆರಗುಗೊಳಿಸಿದರು, ಹೆಚ್ಚಿನ ಖ್ಯಾದೆ ಯನ್ನು ತಂದ ಸಂಘಕ್ಕೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು