ಸಂತ ಅನ್ನ ಮತ್ತು ಸಂತ ಜೋಕಿಮ್ ಸಮರ್ಪಿತ ದಿನವಾದ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮ
ಮುಲ್ಕಿ: ಸಂತ ಅನ್ನ ಮತ್ತು ಸಂತ ಜೋಕಿಮ್ ಸಮರ್ಪಿತ ದಿನವಾದ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮ ಭಾನುವಾರ ಕಾರ್ನಾಡ್ ಸೈoಟ್ ಜೋಸೆಫ್ ಚರ್ಚ್ ಸಭಾಂಗಣದಲ್ಲಿ ನಡೆಯಿತು
ಚರ್ಚ್ ನ ಧರ್ಮಗುರು ಫಾ. ಆ್ಯಂಟನಿ ಶರಾ ಮಾತನಾಡಿ ಹಿರಿಯರ ಸಮಾಜಮುಖಿ ಸೇವೆಗಳನ್ನು ಗೌರವಿಸಲು ಮತ್ತು ಅವರ ಆರೋಗ್ಯ ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಹಿರಿಯ ನಾಗರಿಕರ ದಿನ ಆಚರಿಸಲಾಗುತ್ತದೆ ಉತ್ತಮ ಸಮಾಜ ನಿರ್ಮಾಣದಲ್ಲಿ ಹಿರಿಯರ ಪಾತ್ರ ಹಾಗೂ ಅವರ ಬುದ್ಧಿವಂತಿಕೆ ಅನುಕರಣೀಯ, ಇದರಿಂದಾಗಿ ಅವರು ಅಭಿನಂದನಾರ್ಹರು ಎಂದರು
ಮುಖ್ಯ ಅತಿಥಿಗಳಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ ನಿಶ್ಮಿತಾ ರೊಡ್ರಿಗಸ್ ಮಾತನಾಡಿ ಹಿರಿಯರ ಆರೋಗ್ಯದ ಜಾಗೃತಿ ಬಗ್ಗೆ ಮಾಹಿತಿ ನೀಡಿದರು
ಮುಲ್ಕಿ ಪೊಲೀಸ್ ಠಾಣೆಯ ,ಪೊಲೀಸ್ ಯಶವಂತ ರವರು ಮಾದಕ ವ್ಯಸನ ಮುಕ್ತ ಸಮಾಜ ಹಾಗೂ ಸೈಬರ್ ಕ್ರೈಂ ಬಗ್ಗೆ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸಿದರು
ವೇದಿಕೆಯಲ್ಲಿ ಮುಲ್ಕಿ ಮೆಡಲಿನ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಮೀನ
ಚರ್ಚ್ ನ 21 ಆಯೋಗದ ಸಂಯೋಜಕ ರೋಲ್ಪಿ ಡಿಕೋಸ್ಟ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೆಮ್ಸ್ ಡಿಸೋಜಾ,ಕಾರ್ಯದರ್ಶಿ ಸುರೇಶ್ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು. ಫಾ. ಆ್ಯಂಟನಿ ಶರಾ ಸ್ವಾಗತಿಸಿದರು
ಜಿನ್ ಮೋಲಿನ್ ಡಿಸೋಜ ಧನ್ಯವಾದ ಅರ್ಪಿಸಿದರು
ಸಂಯೋಜಕ ರೋಲ್ಪಿ ಡಿಕೋಸ್ಟ ನಿರೂಪಿಸಿದರು, ಬಳಿಕ ಮುಲ್ಕಿ ಪರಿಸರದ ಹಿರಿಯ ನಾಗರಿಕರನ್ನು ಗೌರವಿಸಲಾಯಿತು