ಮುಲ್ಕಿ :ರೈಲ್ವೇ ನಿಲ್ದಾಣದ ಶೌಚಾಲಯ ದುರಸ್ತಿಗೆ ಆಗ್ರಹ
ಮುಲ್ಕಿ: ರೈಲ್ವೇ ನಿಲ್ದಾಣದ ಶೌಚಾಲಯದಲ್ಲಿ ತ್ಯಾಜ್ಯ ನೀರು ಭರ್ತಿಯಾಗಿ ಸೋರಿಕೆಯಾಗುತ್ತಿದ್ದು ಪರಿಸರ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ
ಮುಲ್ಕಿ ರೈಲ್ವೇ ನಿಲ್ದಾಣಕ್ಕೆ ದಿನಕ್ಕೆ ಸಾವಿರಾರು ಪ್ರಯಾಣಿಕರು ವಿವಿಧ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ
ಪ್ರಯಾಣಿಕರಿಗೆ ಸುಸಜ್ಜಿತ ಶೌಚಾಲಯ ಸಹಿತ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದು ರೈಲ್ವೇ ಇಲಾಖೆಯ ಕರ್ತವ್ಯವಾಗಿದೆ
ಆದರೆ ಮುಲ್ಕಿ ರೈಲ್ವೇ ನಿಲ್ದಾಣದಲ್ಲಿ ಇದು ಮರೀಚಿಕೆಯಾಗಿದೆ
ರೈಲ್ವೇ ನಿಲ್ದಾಣದ ಎದುರು ಭಾಗದ ಕಾರು ಹಾಗೂ ದ್ವಿಚಕ್ರ ವಾಹನ ನಿಲ್ದಾಣದ ಸ್ಥಳದಲ್ಲಿ ಶೌಚಾಲಯದ ತ್ಯಾಜ್ಯ ನೀರು ಸೋರಿಕೆಯಾಗುತ್ತಿದ್ದು ಹೊರಗಡೆ ತ್ಯಾಜ್ಯ ನೀರು ಹರಿಯುತ್ತಿದೆ ಎಂದು ವಾಹನ ಚಾಲಕರು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ
ತ್ಯಾಜ್ಯ ನೀರು ಸೋರಿಕೆಯಿಂದ ಪರಿಸರದಲ್ಲಿ ದುರ್ವಾಸನೆ ಹಾಗೂ ರೋಗದ ಭೀತಿ ಎದುರಾಗಿದೆ
ಈ ಬಗ್ಗೆ ರೈಲ್ವೇ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ
ಇದೀಗ ರೈಲ್ವೆ ಇಲಾಖೆ ಶೌಚಾಲಯ ದುರಸ್ತಿ ಮಾಡುವುದರ ಬದಲು ಶೌಶಾಲಯಕ್ಕೆ ಬೀಗ ಜಡಿದಿದೆ .
ಕೂಡಲೇ ರೈಲ್ವೇ ಅಧಿಕಾರಿಗಳು ಎಚ್ಚೆತ್ತು ಶೌಚಾಲಯ ದುರಸ್ತಿ ಪಡಿಸಬೇಕು ಎಂದು ಸ್ಥಳೀಯ ಒತ್ತಾಯಿಸಿದ್ದಾರೆ.