ಶಿಮಂತೂರು: ಶ್ರೀ ಆದಿ ಜನಾರ್ಧನ ದೇವಸ್ಥಾನದ ಅಭಿವೃದ್ಧಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನುದಾನ ಹಸ್ತಾಂತರ
ಮುಲ್ಕಿ:ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ನೂತನ ಭೋಜನಶಾಲೆ ಮತ್ತು ಸಭಾಗೃಹ ನಿರ್ಮಾಣಕ್ಕಾಗಿ ಕ್ಷೇತ್ರದ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ ರವರ ಮನವಿ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಮಾರು 3 ಲಕ್ಷ ಅನುದಾನದ ಚೆಕ್ ನ್ನು ಕ್ಷೇತ್ರಕ್ಕೆ ಹಸ್ತಾಂತರಿಸಲಾಯಿತು
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಜಪೆ ತಾಲೂಕಿನ ಯೋಜನಾಧಿಕಾರಿ ಗಿರೀಶ್ ಕುಮಾರ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ಆಶೀರ್ವಾದದೊಂದಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧಾರ್ಮಿಕ , ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅನುದಾನ ನೀಡಲಾಗುತ್ತಿದ್ದು, ಅಭಿವೃದ್ಧಿಗೆ ಸದಾ ಸಹಕಾರ ಇದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜನಜಾಗೃತಿ ವೇದಿಕೆಯ ಮಾಜೀ ಅಧ್ಯಕ್ಷ ಭುವನಾಭಿರಾಮ ಉಡುಪ ಕಿನ್ನಿಗೋಳಿ ಮಾತನಾಡಿ ಧ.ಗ್ರಾ.ಯೋ. ಜನಸ್ನೇಹಿಯಾಗಿದ್ದು ವಿವಿಧ ಕ್ಷೇತ್ರಗಳಿಗೆ ಸಹಕಾರ ನಿರಂತರವಾಗಿ ನಡೆಯುತ್ತಿದೆ ಎಂದರು
ಈ ಸಂದರ್ಭ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅರ್ಚಕ ಪುರುಷೋತ್ತಮ ಭಟ್, ಶಾಂತರಾಮ ಹೆಗ್ಡೆ ತೆಂಗಾಳಿ, ಶೇಖರ ಎಂ,ರೂಪ ವಿಷ್ಣುಮೂರ್ತಿ ಭಟ್, ಶಶಿಕಲಾ, ನಂದನ ಶೆಟ್ಟಿ ಕುಬೆವೂರು ರವರು ಕ್ಷೇತ್ರದ ಅನುದಾನದ ಚೆಕ್ ಸ್ವೀಕರಿಸಿದರು
ಮುಖ್ಯ ಅತಿಥಿಗಳಾಗಿ ಜನಜಾಗೃತಿ ವೇದಿಕೆಯ ಸದಸ್ಯರಾದ ಹೇಮಚಂದ್ರ, ಕಿಲ್ಪಾಡಿ ವಲಯ ಒಕ್ಕೂಟದ ಅಧ್ಯಕ್ಷ ಲಕ್ಷ್ಮೀನಾರಾಯಣ, ಶಿಮತೂರು ಕಾರ್ಯಕ್ಷೇತ್ರದ ಒಕ್ಕೂಟದ ಅಧ್ಯಕ್ಷೆ ಶಾರದಾ ವಸಂತ್, ಅಂಗರಗುಡ್ಡೆ
ಸೇವಾಪ್ರತಿನಿದಿ ಸುಕನ್ಯಾ ಮತ್ತು ಪ್ರಮೀಳಾ. ಡಿ,
ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಸುಧೀರ್ ಶೆಟ್ಟಿ, ಅತಿಕಾರಿಬೆಟ್ಟು ಗ್ರಾ ಪಂ ಮಾಜೀ ಅಧ್ಯಕ್ಷ ಮನೋಹರ ಕೋಟ್ಯಾನ್,ಮಾಜೀ ಸದಸ್ಯರಾದ ಪದ್ಮಿನಿ ವಿಜಯ ಶೆಟ್ಟಿ, ಹರೀಶ್ ಶೆಟ್ಟಿ, ಉದಯ ಶೆಟ್ಟಿ ಅಧಿಧನ್, ದಿನೇಶ್ಚಂದ್ರ ಅಜಿಲ ಮೋಹನ್ ಕೋಟ್ಯಾನ್, ಬಾಲಕೃಷ್ಣ ಶೆಟ್ಟಿ, ಅಂಬೆಲಬೀಡು, ತಾರಾನಾಥ ಅಂಗರಗುಡ್ಡೆ, ಅವಿನಾಶ್ ಶೆಟ್ಟಿ
ಗುತ್ತಿಗೆದಾರ ನಿತಿನ್ ಶೆಟ್ಟಿ ಪಂಜಿನಡ್ಕ ಮತ್ತಿತರರು ಉಪಸ್ಥಿತರಿದ್ದರು. ಪ್ರವೀಣ್ ಶೆಟ್ಟಿ ನಿರೂಪಿಸಿದರು