Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ರಾಮಕೃಷ್ಣ ಪೂಂಜ ಚಾರಿ ಟೇಬಲ್ ಟ್ರಸ್ಟ್‌ ವತಿಯಿಂದ,ಟ್ರಸ್ಟಿ ಭಾಸ್ಕ‌ರ್ ಪೂಂಜಾ ಸಹಕಾರದೊಂದಿಗೆ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಹಸ್ತ ನೀಡುವ ಕಾರ್ಯಕ್ರಮ

ಮುಲ್ಕಿ: ರಾಮಕೃಷ್ಣ ಪೂಂಜ ಚಾರಿ ಟೇಬಲ್ ಟ್ರಸ್ಟ್‌ ವತಿಯಿಂದ,ಟ್ರಸ್ಟಿ ಭಾಸ್ಕ‌ರ್ ಪೂಂಜಾ ಸಹಕಾರದೊಂದಿಗೆ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಹಸ್ತ ನೀಡುವ ಕಾರ್ಯಕ್ರಮ ಮುಲ್ಕಿಯ ಕಾರ್ನಾಡ್ ಪೂಂಜಾ ವಿಲ್ಲಾ ದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ  ನಿಸ್ವಾರ್ಥ ಸೇವಾ ಮನೋಭಾವನೆ  ಮೂಲಕ ಪೂಂಜಾ ಟ್ರಸ್ಟ್ ನ ಸಹಾಯ ಹಸ್ತ ಕಾರ್ಯ ಅಭಿನಂದನೀಯ, ಟ್ರಸ್ಟ್ ನ ಕಾರ್ಯಕ್ರಮಗಳು ನಿರಂತರವಾಗಿ ನಡೆದು ಜನರ ಕಷ್ಟಗಳು ಪರಿಹಾರವಾಗಿ ಲೋಕದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂದರು
ಮುಖ್ಯ ಅತಿಥಿಗಳಾಗಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಜೀವನದಲ್ಲಿ ಮಾನವೀಯ ಮೌಲ್ಯಗಳು ಮುಖ್ಯವಾಗಿದ್ದು   ಅರವಿಂದ ಪೂಂಜಾ ಕುಟುಂಬಸ್ಥರು ಟ್ರಸ್ಟ್ ಮೂಲಕ  ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಗುರುತಿಸಿ ಸಹಾಯ  ನೀಡುವ ಕಾರ್ಯ ದೇವರು ಮೆಚ್ಚುವ ಕೆಲಸ ಎಂದರು. ತಮ್ಮ ಕ್ಷೇತ್ರದಲ್ಲಿ ಮುಲ್ಕಿ ತಾಲೂಕು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ ಎಂದರು
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಂಜ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದ್ಯಮಿ ಅರವಿಂದ ಪೂಂಜಾ ವಹಿಸಿದ್ದರು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜೀ ಸಚಿವ ಅಭಯ ಚಂದ್ರ ಜೈನ್, ,ಪೂಂಜಾ ಚಾರಿಟೇಬಲ್ ಟ್ರಸ್ಟಿಗಳಾದ ಗಳಾದ ಅಶ್ವಿನಿ ಪೂಂಜ, ಆದಿತ್ಯ ಪೂಂಜಾ, ಅಪೂರ್ವ ಪೂಂಜಾ, ಸಂಜನಾ ಪೂಂಜಾ ಹಾಗೂ ಪೂಂಜಾ ಚಾರಿಟಬಲ್ ಟ್ರಸ್ಟ್ ನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 
 ಟ್ರಸ್ಟ್ ನ ಅಧ್ಯಕ್ಷ ಎಂ ಎಚ್ ಅರವಿಂದ ಪೂಂಜಾ ಸ್ವಾಗತಿಸಿದರು,ಸಮಿತಿ ಸದಸ್ಯ ಸುನೀಲ್ ಆಳ್ವ ಧನ್ಯವಾದ ಅರ್ಪಿಸಿದರು 
ನಿವೃತ್ತ ಉಪನ್ಯಾಸಕ ವೈ ಎನ್ ಸಾಲ್ಯಾನ್  ನಿರೂಪಿಸಿದರು.
ಬಳಿಕ ಸುಮಾರು 220ಮಂದಿಗೆ 20ಲಕ್ಷ ವೆಚ್ಚದ ವೈದ್ಯಕೀಯ ಸಹಾಯಹಸ್ತ ನೀಡಲಾಯಿತು