Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಜೀವನದಲ್ಲಿ ಸೇವಾ ಭಾವನೆ ಬೆಳೆಸಿಕೊಳ್ಳಿ-ಡಾ. ಹರಿಕೃಷ್ಣ ಪುನರೂರು

 ಮುಲ್ಕಿ: ಜೀವನದಲ್ಲಿ ಮಾನವೀಯ ಮೌಲ್ಯಗಳ ಮೂಲಕ ಸೇವಾ ಭಾವನೆ ಬೆಳೆಸಿಕೊಂಡು ಬಡವರ ಕಣ್ಣೀರೊರೆಸುವ ಕಾರ್ಯ ನಡೆಸಬೇಕಾಗಿದೆ, ಸಮಾಜದ ಒಳಿತಿಗೆ ತಮ್ಮಿಂದಾದಷ್ಟು ಸಹಾಯ ಮಾಡಿದರೆ ದೇವರ ಆಶೀರ್ವಾದ ಖಂಡಿತ ಇದೆ , ಸೇವೆಯೇ ಕರ್ತವ್ಯವಾಗಬೇಕು ಎಂದು ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಹೇಳಿದರು 
ಅವರು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ ಭಾನುವಾರ ಸಂಜೆ ನಡೆದ ಲಯನ್ಸ್ ಕ್ಲಬ್   ನ 2026 27 ನೇ ಸಾಲಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು 
ಲಯನ್ಸ್ ಮಾಜೀ ರಾಜ್ಯಪಾಲ ಮೆಲ್ವಿನ್ ಡಿಸೋಜ ಪದಗ್ರಹಣ ನಡೆಸಿಕೊಟ್ಟರು
ವೇದಿಕೆಯಲ್ಲಿ ಲಯನ್ಸ್ ಸಂಸ್ಥೆಯ ರಮೇಶ್ ರಾಥೋಡ್, ದೀಪಕ್ ಪೆರ್ಮುದೆ, ಸಂದೀಪ್ ಸುವರ್ಣ ನಿಡ್ದೋಡಿ,ರೋಲ್ಪಿ ಡಿಕೋಸ್ಟ, ನೂತನ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಮಾಜೀ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಪ್ರಬೋದ್ ಕುಡ್ವ, ಮೋಹನ್ ದಾಸ್ ಹೆಜ್ಮಾಡಿ, ಸುಶೀಲ್ ಕುಮಾರ್, ಸದಾಶಿವ ಹೊಸದುರ್ಗ, ದೇವಪ್ರಸಾದ್ ಪುನರೂರು, ಕಿಶೋರ್ ಶೆಟ್ಟಿ ಬಪ್ಪನಾಡು, ರಂಗನಾಥ ಶೆಟ್ಟಿ,ಭಾನುಮತಿ ಶೆಟ್ಟಿ ಕಕ್ವಗುತ್ತು,ಉದಯಕುಮಾರ್ ಶೆಟ್ಟಿ ಕಾರ್ನಾಡ್, ಲತಾ ಶೇಖರ್, ನಿರುಪಮಾ ಪಿ ಶೆಟ್ಟಿ, ಶೋಭಾ ಸುಜಿತ್ ಸಾಲ್ಯಾನ್, ಉದಯ ಅಮೀನ್ ಮಟ್ಟು ಲಿಯೋ ಕ್ಲಬ್ ನೂತನ ಅಧ್ಯಕ್ಷೆ ಶೃದ್ಧಾ ಕೋಟ್ಯಾನ್, ಕಾರ್ಯದರ್ಶಿ ಸಮೃದ್ಧಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು 
ನೂತನ ಅಧ್ಯಕ್ಷ ಪ್ರವೀಣ್ ಶೆಟ್ಟಿ,ಸ್ವಾಗತಿಸಿದರು,ಉದಯ ಅಮೀನ್ ಮಟ್ಟು,ಶೀತಲ್ ಸುಶೀಲ್ ನಿರೂಪಿಸಿದರು
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯಲ್ಲಿ 50 ವರ್ಷಗಳನ್ನು ಪೂರೈಸಿದ ಡಾ. ಹರಿಕೃಷ್ಣ ಪುನರೂರು ರವರನ್ನು ಸನ್ಮಾನಿಸಲಾಯಿತು, ಶೈಕ್ಷಣಿಕ ಸಾಧಕರನ್ನು ಗೌರವಿಸಲಾಯಿತು, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ನೀಡಲಾಯಿತು.