Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

80ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ: “ನಂಡೊ‌ ಪಿರ್ಸತ್ತೊ ಭಾರತ” ಪ್ರಬಂಧ ಸ್ಪರ್ಧೆ

ಮುಲ್ಕಿ: ಮುಲ್ಕಿ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ತು ವತಿಯಿಂದ ಅಟ್ಲಾಸ್ ಗೋಲ್ಡ್ ಆ್ಯಂಡ್  ಡೈಮಂಡ್ ಸುರತ್ಕಲ್ ಇದರ ಸಹಯೋಗದೊಂದಿಗೆ 80ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮುಲ್ಕಿ ತಾಲೂಕು ಮಟ್ಟದ “ನಂಡೊ ಪಿರ್ಸತ್ತೊ ಭಾರತ” ಬ್ಯಾರಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ಪ್ರಬಂಧವು ಕನ್ನಡ ಲಿಪಿಯಲ್ಲಿ ಬ್ಯಾರಿ ಭಾಷೆಯಲ್ಲಿರಬೇಕು. ಪ್ರಬಂಧವನ್ನು ಒಂದುಗೆರೆಯ ಪುಟದಲ್ಲಿ ಬರೆಯಬೇಕು. ಸ್ಪಷ್ಟವಾದ ಕೈಬರಹದಲ್ಲಿ ಬರೆದಿರಬೇಕು ಮತ್ತು  ಗರಿಷ್ಠ 300 ಪದಗಳು ಮೀರದಂತಿರಬೇಕು. ಸ್ಪರ್ಧಿಗಳು ತಮ್ಮ ಹೆಸರು, ಪೂರ್ಣ ವಿಳಾಸ, ಫೊಟೊ, ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರಬಂಧದ ಕೆಳಗೆ ಸ್ಪಷ್ಟವಾಗಿ ಬರೆಯಬೇಕು. ಒಬ್ಬರಿಂದ ಒಂದು ಪ್ರಬಂಧವನ್ನಷ್ಟೇ ಪರಿಗಣಿಸಲಾಗುವುದು. ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ, ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು 

ಪ್ರಬಂಧವನ್ನು ಆಗಸ್ಟ್ 10ರ ಮುಂಚಿತವಾಗಿ ಸಮಯ ಕಮ್ಯೂನಿಕೇಶನ್ ನಂ 204, ಸಿಟಿ ಸ್ಕ್ವಾರ್ ಬಿಲ್ಡಿಂಗ್, ಮೈದಾನ ರಸ್ತೆ, ಸುರತ್ಕಲ್ -575014ಗೆ ಕಳುಹಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಬಶೀರ್ ಮೂಡುತೋಟ +91 98806 39141, ತ್ವಯ್ಯಿಬ್ ಫೈಝಿ ಬೊಳ್ಳೂರು - 9567493297 ಮತ್ತು ರಹ್ಮಾನ್ ಹಳೆಯಂಗಡಿ +91 9880427527 ಅವರನ್ನು ಸಂಪರ್ಕಿಸಬಹುದು ಎಂದು ಮುಲ್ಕಿ ತಾಲೂಕು ಬ್ಯಾರಿ‌ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ನಿಸಾರ್ ಅಹ್ಮದ್ ಅಂಗರಗುಡ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.