Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಾರ್ಮಿಕರು ಶ್ರಮ ಹಾಗೂ ಪರೋಪಕಾರಿ ಜೀವನದ ಮೂಲಕ ಸಾಧಕರು -ಡಾ.ಹರಿಕೃಷ್ಣ ಪುನರೂರು

ಮುಲ್ಕಿ: ಕಾರ್ಮಿಕರು ದೇಶದ ರಾಯಭಾರಿಗಳಾಗಿದ್ದು  ಶ್ರಮ ಹಾಗೂ ಪರೋಪಕಾರಿ
 ಜೀವನದ ಮೂಲಕ ಸಮಾಜದಲ್ಲಿ ಉತ್ತಮ ಸಾಧಕರಾಗಿದ್ದಾರೆ    ಎಂದು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು ಅವರು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ನ ಸಭಾಂಗಣದಲ್ಲಿ ಮಂಗಳವಾರ ನಡೆದ ಹೊಸ ಅಂಗಣ ತಿಂಗಳ ಬೆಳಕು ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ  ಭಾನುಮತಿ ಶೆಟ್ಟಿ ಕಕ್ವಗುತ್ತು, ಸುರೇಂದ್ರ ಶೆಣೈಮುಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷೆ ಚರಿಶ್ಮ ಶ್ರೀನಿವಾಸ್
 ಕಕ್ವ,ಮುಲ್ಕಿ ಲಯನ್ಸ್ ಕ್ಲಬ್‌ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಹಬಿಬುಲ್ಲ ,ಸರೋಜಿನಿ ಸುವರ್ಣ,ಹೊಸ ಅಂಗಣದ ಹರೀಶ್ಚಂದ್ರ ಪಿ ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ಶಶಿ ಅಮೀನ್ ಗೇರುಕಟ್ಟೆ
ವಿಜಯಾ ಹರಿಶ್ಚಂದ್ರ ಸಾಲ್ಯಾನ್,ಸಾಧು ಅಂಚನ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು ಹರೀಶ್ಚಂದ್ರ ಪಿ ಸಾಲ್ಯಾನ್ ಸ್ವಾಗತಿಸಿದರು, ವಾಸು ಪೂಜಾರಿ ಧನ್ಯವಾದ ಅರ್ಪಿಸಿದರು ದಿನೇಶ್ ಕೋಲ್ನಾಡು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪರೋಪಕಾರಿ ಹಾಗೂ ಸ್ನೇಹಜೀವಿಯಾದ ಪೈಂಟರ್ ವೃತ್ತಿ ನಡೆಸುತ್ತಿರುವ  ಸಲ್ವಡೋ ಡಿಸೋಜ ಗೇರುಕಟ್ಟೆ ರವರನ್ನು ಗೌರವಿಸಲಾಯಿತು