ಬೆಥನಿ ಶಾಲೆಯಲ್ಲಿ ನೂತನ AI ಮತ್ತು ರೊಬೊಟಿಕ್ಸ್ ಲ್ಯಾಬ್ ಉದ್ಘಾಟನೆ
ಮುಲ್ಕಿ : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಕಿಲ್ಪಾಡಿಯ ಬೆಥನಿ ಐಸಿಎಸ್‌ಇ ಶಾಲೆಯಲ್ಲಿ ನೂತನ AI ಮತ್ತು ರೊಬೊಟಿಕ್ಸ್ ಲ್ಯಾಬ್ ಅನ್ನು ಜು. 7ರಂದು ಉದ್ಘಾಟನೆಗೊಂಡಿತು.
ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಶಾಲೆಯ ಭ. ಅರುಣ್ ಸಾವಿಯೋ ಬಿ.ಎಸ್. ಅವರು ರಿಬ್ಬನ್ ಕತ್ತರಿಸುವ ಮೂಲಕ ಲ್ಯಾಬ್ ಅನ್ನು ಉದ್ಘಾಟಿಸಿದರು. ಫಾ. ಸುಶೀಲ್ ಎಸ್.ವಿ.ಡಿ. ಅವರು ಆಶೀರ್ವಚನ ನೀಡಿ ಶುಭ ಹಾರೈಸಿದರು. ಆಗಮಿಸಿದ ಗಣ್ಯ ಅತಿಥಿಗಳನ್ನು ಶಾಲೆಯ ವತಿಯಿಂದ ಹೂವಿನ ಗಿಡ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ (AI) ಹಾಗೂ ರೊಬೊಟಿಕ್ಸ್‌ನ ಮಹತ್ವ, ಅದರ ಉಪಯೋಗಗಳು ಮತ್ತು ಭವಿಷ್ಯದ ಅವಕಾಶಗಳ ಕುರಿತು ಮಾಹಿತಿ ನೀಡಿದರು.