Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್‌ರವರು ಹೊಸ ಅಂಗಣ ಪ್ರಕಟಣಾಲಯದ ಮೂಲಕ ರಚಿಸಿದ 24ನೇ ಕೃತಿ 'ತುಳುನಾಡಿನ ಆಟಿ ತಿಂಗಳು" ಕೃತಿ ಬಿಡುಗಡೆ

ಮುಲ್ಕಿ:ಜೀವನದಲ್ಲಿ ನಿರಂತರ ಓದು ಮತ್ತು ಬರವಣಿಗೆಗಳ ಮೂಲಕ ಪತ್ರಿಕೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಕೃತಿಕಾರರನ್ನು ಗೌರವಿಸಿ ಎಂದು ಕಸಾಪ ಪೂರ್ವ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.
 ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶನಿವಾರ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್‌ರವರು ಹೊಸ ಅಂಗಣ ಪ್ರಕಟಣಾಲಯದ ಮೂಲಕ ರಚಿಸಿದ 24ನೇ ಕೃತಿ 'ತುಳುನಾಡಿನ ಆಟಿ ತಿಂಗಳು" ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃತಿ ಬಿಡುಗಡೆಗೊಳಿಸಿದ ಟಿವಿ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್ ಮಾತನಾಡಿ, ಆಟಿ ತಿಂಗಳ ಆಚರಣೆಗಳ ಸತ್ವ, ಸತ್ಯ ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಳಕಳಿಯ ಶಿಕ್ಷಕಿ ಶೋಭಾ ಯು.ರವರನ್ನು ಹೊಸ ಅಂಗಣ ಪ್ರಕಟಣಾಲಯದ ವತಿಯಿಂದ ಗೌರವಿಸಲಾಯಿತು
ಪಡುಬಿದ್ರಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಿ.ಕೆ.ಸದಾನಂದ, ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ಟಗುತ್ತು, ಮತ್ತು ಮುಲ್ಕಿ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹರೀಂದ್ರ ಎಸ್. ಸುವರ್ಣ, ಜಯಪಾಲ್ ಶೆಟ್ಟಿ ಐಕಳ ಮುಖ್ಯ ಅತಿಥಿಗಳಾಗಿದ್ದರು.
ಕೃತಿಕರ್ತ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಕೃತಿ ಪರಿಚಯ ಮಾಡಿದರು. ದಿನೇಶ್ ಶೆಟ್ಟಿ ಸ್ವಾಗತಿಸಿದರು. ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರ್ವಹಿಸಿದರು. ವಾಸು ಪೂಜಾರಿ ವಂದಿಸಿದರು.
(ಚಿತ್ರ ಇದೆ:ಹೊಸ ಅಂಗಣ ಪ್ರಕಟಣಾಲಯದ ಮೂಲಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ರಚಿಸಿದ ತುಳುನಾಡಿನ ಆಟಿ ತಿಂಗಳು ಕೃತಿ ಬಿಡುಗಡೆಗೊಳಿಸಲಾಯಿತು)