ಮೂಡಬಿದಿರೆ ಬಸ್ ನಿಲ್ದಾಣದಲ್ಲಿ ಕತ್ತಿ ಹಿಡಿದುಕೊಂಡು ಯುವಕನ ಹುಚ್ಚಾಟ,ಸ್ಥಳೀಯರಲ್ಲಿ ಭಯದ ವಾತವರಣ
ಮೂಡಬಿದಿರೆ:ಇಲ್ಲಿನ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಕತ್ತಿಹಿಡಿದುಕೊಂಡು ಮೊಬೈಲ್ ಅಂಗಡಿಗೆ ನುಗ್ಗಿ ಸ್ಥಳೀಯರಲ್ಲಿ ಭಯದ ವಾತವರಣವನ್ನು ಉಂಟುಮಾಡಿದ ಘಟನೆ ಶನಿವಾರ ನಡೆದಿದೆ.ಬಂಟ್ವಾಳ ಮೂಲದ ಯುವಕ ರಾಜೇಶ್ ಎಂಬಾತನು ಬಸ್ ನಿಲ್ದಾಣದ ಸಮೀಪ ಕತ್ತಿ ಹಿಡಿದುಕೊಂಡು ಹೋಗುತ್ತಿದ್ದು,ಬಳಿಕ ಮೊಬೈಲ್ ಅಂಗಡಿಯೊಳಗೆ ನುಗ್ಗಿ ಗಲಾಟೆ ಮಾಡಿದ್ದಾನೆ.ಕೆಲ ಯುವಕರು ಆತನನ್ನು ಹಿಡಿಯಲು ಹರಸಾಹಸ ಪಡುವಂತಾಯಿತು.ಕೊನೆಗೂ ಯುವಕನನ್ನು ಯುವಕರ ತಂಡ ಲಾಕ್ ಮಾಡಿ ಪೋಲಿಸರಿಗೊಪ್ಪಿಸಿದ್ದಾರೆ.ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದು,ತನಿಖೆ ಮುಂದುವರಿಸಿದ್ದಾರೆ.