Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕುಪ್ಪೆಪದವು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಯುವ ವೇದಿಕೆ ಮತ್ತು ನಾರಾಯಣ ಗುರು ಮಹಿಳಾ ವೇದಿಕೆ ಕುಪ್ಪೆಪದವು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕೈಕಂಬ : ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಯುವ ವೇದಿಕೆ ಮತ್ತು ನಾರಾಯಣ ಗುರು ಮಹಿಳಾ ವೇದಿಕೆ  ಕುಪ್ಪೆಪದವು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗುರುನಗರದ  ನಾರಾಯಣ ಗುರು ಸಭಾಭವನದಲ್ಲಿ ದೀಪ ಬೆಳಗಿಸಿ  ಉದ್ಘಾಟಿಸಲಾಯಿತು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ    ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಸಾಲ್ಯಾನ್ ತಾರಿಪಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಯುವ ವೇದಿಕೆಯ ನಿರ್ಗಮಿತ ಅಧ್ಯಕ್ಷ ಶೇಖರ್ ನೇಲ್ಲಚ್ಚಿಲ್ ಮಾತನಾಡಿ, ಕಳೆದ 11 ವರ್ಷಗಳಿಂದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ ಸಮಾಜದಲ್ಲಿ ಒಗ್ಗಟ್ಟು ತರಲು ಶೇಮಿಸಿದ್ದೇನೆ. ಬಿಲ್ಲವ ಸಮಾಜದ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಧ್ಯಕ್ಷನಾಗಿದ್ದ ಸಂಧರ್ಭ ನನಗೆ ಸಹಕಾರ ನೀಡಿದ ನಾರಾಯಣಗುರು ಸೇವಾ ಸಮಿತಿ ಮತ್ತು ಸಮಾಜ ಭಾಂದವರಿಗೆ ಧನ್ಯವಾದ ಸಲ್ಲಿಸಿದರು.  ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಂತಿ ಅಟ್ಟೆಪದವು ಮಾತನಾಡಿದರು.

ಪ್ರಾಸ್ತಾವಿಕ ಮಾತನಾಡಿದ ವಿನೋದ್ ಕುಮಾರ್ ಅಂಬೆಲೊಟ್ಟು, ಕಳೆದ 23 ವರ್ಷಗಳ ಹಿಂದೆ ಸ್ಥಾಪನೆಯಾದ ಬಿಲ್ಲವ ಯುವ ವೇದಿಕೆ ಹಮ್ಮಿಕೊಂಡ ಕಾರ್ಯಕ್ರಮಗಳು ಮತ್ತು ವೇದಿಕೆ ನಡೆದುಕೊಂಡು ಬಂದ ಬಗ್ಗೆ ವಿವರಿಸಿದರು.
ನಿರ್ಗಮಿತ ಅಧ್ಯಕ್ಷ ಶೇಖರ್ ನೇಲ್ಲಚ್ಚಿಲ್ ಮತ್ತು ನಿರ್ಗಮಿತ ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಂತಿ ಅಟ್ಟೆಪದವು ಅವರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

 ನಾರಾಯಣ ಗುರು ಸೇವಾ ಸಮಿತಿಯ ಕಾರ್ಯದರ್ಶಿ ರಘು ಎಂ. ಅಗರಿ,
ನಾರಾಯಣ ಗುರು ಸೇವಾ ಸಮಿತಿಯ ಉಪಾಧ್ಯಕ್ಷ ಚಂದ್ರ ಬಳ್ಳಾಜೆ,  ನಾರಾಯಣ ಗುರು ಯುವ ವೇದಿಕೆಯ ನಿರ್ಗಮಿತ ಕಾರ್ಯದರ್ಶಿ ರೀಕಯ್ಯ ಅಟ್ಟೆಪದದವು, ಮತ್ತು  ನಾರಾಯಣ ಗುರು ಯುವ ವೇದಿಕೆಯ ನೂತನ ಅಧ್ಯಕ್ಷ ರಾಮಚಂದ್ರ ಐನ, ಕಾರ್ಯದರ್ಶಿ ಹರೀಶ್ ಸುವರ್ಣ ಅಂಬೆಲೊಟ್ಟು, ನಾರಾಯಣ ಗುರು ಮಹಿಳಾ ವೇದಿಕೆಯ ನೂತನ ಅಧ್ಯಕ್ಷೆ ಸುಜಾತ ಬಳ್ಳಿ, ಕಾರ್ಯದರ್ಶಿ 
ನಮಿತಾ ಅಟ್ಟೆಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಶವಂತ ಅಗರಿ ನಿರೂಪಿಸಿದರು. ಲೋಕೇಶ್ ಚಂದ್ರಮಜಲು  ಸ್ವಾಗತಿಸಿ, ಸತೀಶ್ ಪೂಜಾರಿ  ಬಳ್ಳಾಜೆ ವಂದಿಸಿದರು.