ಪರಿಸರ ಸಂರಕ್ಷಣೆಯತ್ತ ಆದರ್ಶ ಬಳಗದ ಅರ್ಥಪೂರ್ಣ ಹೆಜ್ಜೆ
ಕಿನ್ನಿಗೋಳಿ : ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆದರ್ಶ ಬಳಗ (ರಿ.), ಕೊಡೆತ್ತೂರು ವತಿಯಿಂದ ವಿಶ್ವಬ್ರಾಹ್ಮಣ ಸಮಾಜ ಕಿನ್ನಿಗೋಳಿ ಸಹಯೋಗದಲ್ಲಿ ವನಮಹೋತ್ಸವ, ಸಸಿ ವಿತರಣೆ ಹಾಗೂ ಅಂಗನವಾಡಿ ಪರಿಸರ ಸ್ವಚ್ಛತಾ ಕಾರ್ಯಕ್ರಮವು ಆಯೋಜನೆಗೊಂಡಿತು.
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜದ ಅಧ್ಯಕ್ಷ ಜಗದೀಶ್ ಆಚಾರ್ಯ ಹಾಗೂ ಕಟ್ಟಡ ಸಮಿತಿಯ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ ವನಮಹೋತ್ಸವಕ್ಕೆ ಚಾಲನೆ ನೀಡಿ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿ ವಿವಿಧ ಜಾತಿಯ ಸಸಿಗಳನ್ನು ವಿತರಿಸಿದರು.
ಕೊಡೆತ್ತೂರು ಆದರ್ಶ ಬಳಗದ ಅದ್ಯಕ್ಷ ಯುವರಾಜ್ ಶೆಟ್ಟಿ ಮಾತನಾಡಿ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯಾದರೂ ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಹಾಗೂ ಪ್ಲಾಸ್ಟಿಕ್ ಬಳಕೆಯಬಗ್ಗೆ ಜನ ಜಾಗ್ರತಿಯನ್ನು ಮೂಡಿಸಬೇಕು ಎಂದರು.
ಆದರ್ಶ ಬಳಗದ ಗೌರವಾಧ್ಯಕ್ಷ ಕೊಡೆತ್ತೂರು ಭುವನಾಬಿರಾಮ ಉಡುಪ,ಮೆನ್ನಬೆಟ್ಟು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸರೋಜಿನಿ ಗುಜರಾನ್, ಮೆನ್ನಬೆಟ್ಟು ಅಂಗನವಾಡಿ ಶಿಕ್ಷಕಿ ಶ್ರೀಮತಿ ಸಂಧ್ಯಾ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯ ದಾಮೋದರ್ ಶೆಟ್ಟಿ, ಸಂಘದ ಕಾಯದರ್ಶಿ ದೇವಿಪ್ರಸಾದ್ ಸುವರ್ಣ, ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್ ಶೆಟ್ಟಿ, ಮಹೇಶ್ ಕರ್ಕೇರ , ಸ್ಥಳೀಯರಾದ ಶ್ರೀಧರ್ ಮೂಲ್ಯ, ಜಯ ಕುಮಾರ್ , ಪದಾಧಿಕಾರಿಗಳು ಹಾಗೂ ಮೊದಲಾದವರು ಉಪಸ್ಥಿತರಿದ್ದರು.