ಕಿನ್ನಿಗೋಳಿ :ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ- ಸಾಧಕರಿಗೆ ಗೌರವ
ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷದ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವೇದವಿದ್ವಾಂಸರ ಸಂಮಾನ, ಕೃತಿ ಬಿಡುಗಡೆ ಸಮಾರಂಭ, ವಿದ್ಯಾರ್ಥಿವೇತನ ವಿತರಣೆಯು ಜುಲೈ 24ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ
ಸಂಸ್ಥೆಯು ನಿರಂತರವಾಗಿ ಕೈಗೊಳ್ಳುತ್ತಿರುವ ಕಾರ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಸಂಸ್ಥೆಯ ಸೇವಾ ಮನೋಭಾವವು ಇತರರಿಗೂ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಉತ್ತಮ ಕಾರ್ಯಗಳು ಮುಂದುವರಿಯಲಿ ಎಂದರು.
ದ. ಕ. ಜಿಲ್ಲಾ ಕ ಸಾ.ಪ ಮಾಜೀ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರರವರು ಸಂಸ್ಮರಣ ಭಾಷಣ ಮಾಡಿದರು ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಪಿ.ವಿ.ಪ್ರದೀಪ್‌ಕುಮಾರ್ ಕಥಾಬಿಂದು ರಚಿತ ಅದಿತಿ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರುರವರು ಬಿಡುಗಡೆ ಗೊಳಿಸಿದರು ಕಾರ್ಯಕ್ರಮದಲ್ಲಿ ಸಾಹಿತಿ ಚಿದಂಬರ ಬೈಕಂಪಾಡಿ ರವರಿಗೆ ಕೊ. ಅ. ಉಡುಪ ಪ್ರಶಸ್ತಿ ನೀಡಿ ಹಾಗೂ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಮದಾಸ ಆಚಾರ್ಯ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು
ಮುಖ್ಯ ಅತಿಥಿಗಳಾಗಿ ಮುಂಬಯಿ ಉದ್ಯಮಿಗಳಾದ ತಾಳಿಪಾಡಿಗುತ್ತು ರಾಮಚಂದ್ರ ಶೆಟ್ಟಿ,ಪೃಥ್ವಿರಾಜ್ ಆಚಾರ್ಯ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಮಂಗಳೂರಿನ ನೆಲ್ಲಿಕಾಯಿ ರಾಘವೇಂದ್ರ ಮಠದ ಅರ್ಚಕ ಜಯರಾಮ್ ಉಡುಪ,ಸಾಹಿತಿ ಡಾ. ಹರೀಶ್ಚಂದ್ರ ಪಿ ಸಾಲ್ಯಾನ್,
ಕೃತಿಕಾರ ಪಿ.ವಿ.ಪ್ರದೀಪ್‌ಕುಮಾರ್, ಡಾ| ನಯನಾಭಿರಾಮ ಉಡುಪ, ಮತ್ತಿತರರು ಉಪಸ್ಥಿತರಿದ್ದರು
ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು, ಅನುಷಾ ಕರ್ಕೇರ, ಹಾಗೂ ಪು. ಗುರುಪ್ರಸಾದ ಭಟ್,ಸನ್ಮಾನ ಪತ್ರ ವಾಚಿಸಿದರು
ಶರತ್ ಶೆಟ್ಟಿ ನಿರೂಪಿಸಿದರುಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ.ಜಿಲ್ಲೆಯ ಸಹಕಾರದೊಂದಿಗೆ ಖ್ಯಾತ ಕಲಾವಿದರಿಂದ ಯಕ್ಷಗಾನ ನಡೆಯಿತು.