ಆಪಾಯಕಾರಿಯಾಗಿ ಪರಿಣಮಿಸಿದ ರಾಜ್ಯ ಹೆದ್ದಾರಿಯಲ್ಲಿನ ಹೊಂಡಗಳು
ಕಿನ್ನಿಗೋಳಿ:ಮೂಲ್ಕಿ ಮೂಡಬಿದಿರೆ ರಾಜ್ಯ ಹೆದ್ದಾರಿಯ ಹೊಸಕಾವೇರಿ ಹಾಗೂ ಪದ್ಮನೂರು ಎಂಬಲ್ಲಿ ಹೆದ್ದಾರಿಯಲ್ಲಿ ಹೊಂಡಗಳು ಉಂಟಾಗಿ ವಾಹನಿಗರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಹೊಂಡಗಳು ಉಂಟಾಗಿ ತಿಂಗಳುಗಳು ಕಳೆದರೂ ಹೊಂಡವನ್ನು ಮುಚ್ಚುವಂತಹ ಕಾರ್ಯವನ್ನು ಕಾರ್ಯವನ್ನು ಮಾಡದೆ ಹೆದ್ದಾರಿ ಇಲಾಖೆ ಮಾತ್ರ ಮೌನ ವಹಿಸುತ್ತಿದೆ. ಆದಿತ್ಯವಾರದಂದು ಹೊಸಕಾವೇರಿ ತಿರುವಿನಲ್ಲಿ ಹೆದ್ದಾರಿಯಲ್ಲಿನ ಹೊಂಡಕ್ಕೆ ಸಿಲುಕಿ ಸ್ಕೂಟರ್ ಸವಾರೆಯೊಬ್ಬರು ಬಿದ್ದು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ರೀತಿಯಾಗಿ ಹಲವು ಸಣ್ಣ ಪುಟ್ಟ ಅಪಘಾತಗಳು ನಡೆಯುತ್ತಿದ್ದು,ಹಲವಾರು ದ್ವಿಚಕ್ರ ವಾಹನಗಳ ಸವಾರರು ಗಾಯಗೊಂಡಿದ್ದಾರೆ. ಆದರೆ ಹೆದ್ದಾರಿ ಇಲಾಖೆ ಮಾತ್ರ ಮೌನವಹಿಸುತ್ತಿದೆ.