ಕಿನ್ನಿಗೋಳಿ ಯಕ್ಷಲಹರಿಯ 36 ನೇ ವರ್ಷ ಸಂಭ್ರಮ ಕರ್ನಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಳೆ ಬಲಂ ಭೀಮಾಭಿರಕ್ಷಿತಂ ಇದರ ಉದ್ಘಾಟನಾ ಕಾರ್ಯಕ್ರಮ
ಕಿನ್ನಿಗೋಳಿ : ಯಕ್ಷಲಹರಿ(ರಿ,)-ಯುಗಪುರುಷ ಕಿನ್ನಿಗೋಳಿ ಇದರ ಸಂಯುಕ್ತ ಆಶ್ರಯದಲ್ಲಿ ಯಕ್ಷಲಹರಿಯ 36 ನೇ ವರ್ಷ ಸಂಭ್ರಮ ಕರ್ನಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಳೆ ಬಲಂ ಭೀಮಾಭಿರಕ್ಷಿತಂ ಇದರ ಉದ್ಘಾಟನಾ ಕಾರ್ಯಕ್ರಮ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಕರ್ನಾಟಕ ಬ್ಯಾಂಕ್ ಕೇಂದ್ರ ಕಚೇರಿ ಮಂಗಳೂರು ಇದರ ಜನರಲ್ ಮ್ಯಾನೇಜರ್ ರಘುರಾಮ್ ಎಚ್ ಎಸ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ|ಮೂ|ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.ಶ್ರೀ ಮಹಾಗಣಪತಿ ಮಂದಿರ ಅತ್ತೂರು ಬೈಲ್ ಇದರ ಅರ್ಚಕರಾದ ವೇ|ಮೂ| ವೆಂಕಟ್ರಾಜ ಉಡುಪ ಶುಭಾಶಂಸನೆ ಮಾಡಿದರು.ಬೆಂಗಳೂರು ಕ.ಸಾ.ಪ ಮಾಜಿ ಅಧ್ಯಕ್ಷ ಧರ್ಮದರ್ಶಿ,ಡಾ. ಹರಿಕೃಷ್ಣ ಪುನರೂರು ಗೌರವ ಉಪಸ್ಥಿತರಿದ್ದರು.
ಯಕ್ಷಲಹರಿಯ ಸ್ಥಾಪಕ ಅಧ್ಯಕ್ಷ ದಿ.ಇ ಶ್ರೀನಿವಾಸ ಭಟ್ ಇವರ ಸಂಸ್ಮರಣಾ ಭಾಷಣವನ್ನು ಕಾರ್ಕಳದ ನಿವೃತ್ತ ಉಪನ್ಯಾಸಕ ರಾಮ ಭಟ್ ಮಾಡಿದರು.
ಸುರತ್ಕಲ್ ಉದ್ಯಮಿ ಕೊಜಪಾಡಿ ಬಾಳಿಕೆ ಚರಣ್ ಜೆ ಶೆಟ್ಟಿ,ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಮೋಹನದಾಸ್ ಸುರತ್ಕಲ್, ಕರ್ನಾಟಕ ಬ್ಯಾಂಕ್ ನಿವೃತ, ಅಧಿಕಾರಿ ವ್ಯಾಸ ಪ್ರಸಾದ್ ಭಟ್ ಎಳತ್ತೂರು,ಸಮಾಜಸೇವಕರಾದ ಗಣಪತಿ ನಾಯಕ್,ಕರ್ಪೆ,ದೇವರ ಮನೆ, ಕಿನ್ನಿಗೋಳಿ ಅನುಗ್ರಹ ಜ್ಯುವೆಲ್ಲರ್ಸ್ ಇದರ ಮಾಲಕರಾದ ಪ್ರದ್ವಿರಾಜ್ ಆಚಾರ್ಯ, ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಹ್ಮಣ್ಯ ಭಟ್ ಕೋರ್ಯಾರ್ ಶಿಬರೂರು ಪ್ರಧಾನ ಅಭ್ಯಾಗತರಾಗಿದ್ದರು.
ಅರ್ಚಕರು ಹಾಗೂ ಹವ್ಯಾಸಿ ಕಲಾವಿದರು ಎಚ್ ರಮೇಶ್ ಭಟ್ ಹೆಜಮಾಡಿ ಇವರಿಗೆ ಕಲಾವಿದ ಸನ್ಮಾನ ಮಾಡಲಾಯಿತು.
ಭುವನಾಭಿರಾಮ ಉಡುಪ ಪ್ರಸ್ತಾವಿಕವಾಗಿ ಮಾತನಾಡಿದರು, ರಘುನಾಥ ಕಾಮತ್ ಸ್ವಾಗತಿಸಿ ವಸಂತ ದೇವಾಡಿಗ ನಿರೂಪಿಸಿದರು, ಶ್ರೀಪತಿ ಭಟ್ ಧನ್ಯವಾದ ಅರ್ಪಿಸಿದರು.