ಜು .27 ರಿಂದ ಆ. 2 ರತನಕ ಕಿನ್ನಿಗೋಳಿ ಯಕ್ಷಲಹರಿಯ 36 ನೇ ವರ್ಷದ ವಾರ್ಷಿಕೋತ್ಸವ ಹಾಗೂಕಿನ್ನಿಗೋಳಿ ಯಕ್ಷಲಹರಿ ( ರಿ) -ಯುಗಪುರುಷ ಯಕ್ಷಗಾನ ತಾಳಮದ್ದಳೆ ಸಪ್ತಾಹ
ಕಿನ್ನಿಗೋಳಿ : ಕಿನ್ನಿಗೋಳಿಯ ಯಕ್ಷಲಹರಿ ( ರಿ) - ಯುಗಪುರುಷದ ಆಶ್ರಯದಲ್ಲಿ ಕರ್ಣಾಟಕ ಬ್ಯಾಂಕ್ ಸಹಕಾರದಲ್ಲಿ ಕಿನ್ನಿಗೋಳಿ ಯಕ್ಷಲಹರಿಯ 36ನೇ ವರ್ಷದ ಯಕ್ಷಗಾನ ತಾಳಮದ್ದಲೆ ಸಪ್ತಾಹ -ಬಲಂ ಭೀಮಾಭಿರಕ್ಷಿತಂ ಜು. 27 ರಿಂದ ಆ.4 ರರ ತನಕ ಯುಗಪುರುಷ ಸಭಾಭವನದಲ್ಲಿ ಸಂಜೆ 3. 15 ರಿಂದ ನಡೆಯಲಿದೆ. ಜು. 27 ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ಮೋಹನ್ ಆಳ್ವ ಅವರು ತಾಳಮದ್ದಳೆ ಕೂಟವನ್ನು ಉದ್ಘಾಟಿಸಲಿದ್ದಾರೆ. ಕರ್ಣಾಟಕ ಬ್ಯಾಂಕ್ ಪ್ರಧಾನ ಕಛೇರಿಯ ಜನರಲ್ ಮ್ಯಾನೇಜರ್ ರಘುರಾಮ್ ಎಚ್ ಎಸ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಟೀಲಿನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಮತ್ತಿತರರು ಉಪಸ್ಥಿತಿಯಲ್ಲಿ ಯಕ್ಷಲಹರಿಯ ಸ್ಥಾಪಕಧ್ಯಕ್ಷ ದಿ. ಶ್ರೀನಿವಾಸ ಭಟ್ ಅವರ ಸಂಸ್ಮರಣೆ ನಡೆಯಲಿದೆ. ಹಿರಿಯ ಕಲಾವಿದ ಎಚ್ ರಮೇಶ್‌ಭಟ್ ಅವರನ್ನು ಗೌರವಿಸಲಾಗುವುದು. ಬಳಿಕ ಬಳಿಕ ಪಾಂಡವ ಜನನ ಯಕ್ಷಗಾನ ಪ್ರಸಂಗ ನಡೆಯಲಿದೆ.
ಜು. 28 ರಂದು ಹಳೆಯಂಗಡಿಯ ಪ್ರಿಯದರ್ಶಿನಿ ಕೋ.ಅಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾರ್ಡ್ ಅವರ ಅಧ್ಯಕ್ಷತೆಯಲ್ಲಿ ಕಟೀಲಿನ ಅರ್ಚಕ ವಾಸುದೇವ ಅವರ ಉಪಸ್ಥಿತಿಯಲ್ಲಿ ಹಿರಿಯ ಕಲಾವಿದ ದಿ. ಯು. ಗೋಪಾಲ ಶೆಟ್ಟಿಅವರ ಸಂಸ್ಮರಣೆ ನಡೆಯಲಿದೆ ಕಲಾವಿದರ ನೆಲೆಯಲ್ಲಿ ಹಿರಿಯ ಭಾಗವತ ಸುಬ್ರಾಯ ಭಟ್ ಗಜಂತೋಡಿ ಅವರನ್ನು ಗೌರವಿಸಲಾಗುವುದು. ಅರಗಿನ ಮನೆ ಹಿಡಿಂಬಾ ವಿವಾಹ ಪ್ರಸಂಗ ಪ್ರಸ್ತುತಿ ನಡೆಯಲಿದೆ.
ಜು. 29ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಕಿನ್ನಿಗೋಳಿ ಘಟಕದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಅವರ ಅಧ್ಯಕ್ಷತೆಯಲ್ಲಿ ಕಟೀಲಿನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರ ಉಪಸ್ಥಿತಿಯಲ್ಲಿ ಶಿಮಂತೂರು ಡಾ| ನಾರಾಯಣ ಶೆಟ್ಟಿಅವರ ಸಂಸ್ಮರಣೆ ಹಾಗೂ ಹಿರಿಯ ಕಲಾವಿದ ಪಾಂಡುರಂಗ ಶೆಟ್ಟಿಕಡಂದಲೆ ಅವರಿಗೆ ಸಮ್ಮಾನ ನಡೆಯಲಿದೆ. ಬಕಾಸುರ ವಧೆ- ಅಂಗಾರ ಪರ್ಣ ಪ್ರಸಂಗ ಪ್ರಸ್ತುತಿ ನಡೆಯಲಿದೆ.
ಜು. 30 ರಂದು ಶ್ರೀ ಕ್ಷೇತ್ರ ಎಳತ್ತೂರಿನ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ದೆ ಅವರ ಅಧ್ಯಕ್ಷತೆಯಲ್ಲಿ ಕಟೀಲಿನ ಅರ್ಚಕ ವೆಂಕರಮಣ ಆಸ್ರಣ್ಣ ಅವರ ಉಪಸ್ಥಿತಿಯಲ್ಲಿ ಪ್ರಸಂಗಕರ್ತ ದಿ. ಗಣೇಶ್ ಕೊಲಕಾಡಿ ಅವರ ಸಂಸ್ಮರಣೆ , ಹಿರಿಯ ಕಲಾವಿದ ಸತೀಶ್ ಶೆಟ್ಟಿ ಅವರನ್ನು ಕಲಾವಿದರ ನೆಲೆಯಲ್ಲಿ ಗೌರವಿಸಲಾಗುವುದು. ಬಳಿಕ ಸಮರ ಸೌಗಂಧಿಕಾ ಪ್ರಸಂಗ ಪ್ರಸ್ತುತಿ ನಡೆಯಲಿದೆ.
ಜು. 31 ರಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ನೆಲ್ಲಿಕಾಯಿ ಮಠದ ಪ್ರಧಾನ ಅರ್ಚಕ ಜಯರಾಮ ಉಡುಪ ಅವರ ಉಪಸ್ಥಿತಿಯಲ್ಲಿ ಕೆಂಚನಕೆರೆ ದೂಜಯಾನೆ ಬೂಬ ಶೆಟ್ಟಿಅವರ ಸಂಸ್ಮರಣೆ ಹಾಗೂ ಹಿರಿಯ ಕಲಾವಿದ ಜಯದೇವಾಡಿಗ ಪಡ್ರೆ ಗೌರವಿಸಲಾಗುವುದು. ಬಳಿಕ ಕೀಚಕ ವಧೆ ಪ್ರಸಂಗ ಪ್ರಸುತ್ತಿ ನಡೆಯಲಿದೆ.
ಜು. 1 ರಂದು ಕಿನ್ನಿಗೋಳಿ ಪಟ್ಣಣ ಪಂಚಾಯುತ್ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ ಅವರ ಅಧ್ಯಕ್ಷತೆಯಲ್ಲಿ ಕಟೀಲು ದೇವಳ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಅವರ ಉಪಸ್ಥಿತಿಯಲ್ಲಿ ಹಿರಿಯ ಪ್ರಸಂಗಕರ್ತ ದಿ. ನಾರಾಯಣ ಪಿ. ಶೆಟ್ಟಿಕುಬೆವೂರು ಅವರ ಸಂಸ್ಮರಣೆ ಹಾಗೂ ಹಿರಿಯ ಕಲಾವಿದ ಜಿನರಾಜ ಸಿ ಸಾಲಿಯಾನ್ ಸಚ್ಚರಿಪೇಟೆ ಅವರನ್ನು ಗೌರವಿಲಾಗುವುದು. ಬಳಿಕ ಸಮರ ಸನ್ನಾಹ ಭೀಮ ದ್ರೌಪದಿ ಸಂವಾದ ಪ್ರಸಂಗ ನಡೆಯಲಿದೆ. ಜು.2 ರಂದು ಸಮಾರೋಪ ಹಾಗೂ ಸಮ್ಮಾನ ವಿದ್ಯಾರ್ಥಿ ವೇತನ ಪ್ರದಾನ ಕಲಾಪೋಷಕ ಸಮ್ಮಾನ ನಡೆಯಲಿದ್ದು ಮಂಗಳೂರು ಕರ್ಣಾಟಕ ಬ್ಯಾಂಕ್ ಕೇಂದ್ರ ಕಚೇರಿಯ ಮ್ಯಾನೆಜಿಂಗ್ ಡೈರೆಕ್ಟರ್ ರಾಘವೇಂದ್ರ ಎಸ್. ಭಟ್ ಅಧ್ಯಕ್ಷತೆಯಲ್ಲಿ ದಿ. ಪಿ ಸತೀಶ್ ರಾವ್ ಅವರ ಸಂಸ್ಮರಣೆ ಹಾಗೂ ಕಲಾವಿದ ಕೆ. ಧರ್ಮರಾಜ ಕಂಬಳಿ ಕಲಾಪೋಷಕರ ನೆಲೆಯಲ್ಲಿ ಡಾ| ಹರಿಕೃಷ್ಣ ಪುನರೂರು ಅವರನ್ನು ಗೌರವಿಸಲಾಗುವುದು . ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಬಳಿಕ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ದುಶ್ಯಾಸನ ವಧೆ, ಗದಾಯುಧ್ದ ತಾಳಮದ್ದಳೆ ಪ್ರಸ್ತುತಿ ನಡೆಯಲಿದೆ ಎಂದು ಯಕ್ಷಲಹರಿಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ, ಪ್ರಧಾನ ಕಾರ್ಯದರ್ಶಿ ವಸಂತ ದೇವಾಡಿಗ ಹಾಗೂ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ತಿಳಿಸಿದ್ದಾರೆ.