ಮಳಲಿ ರಾಮಾಂಜನೇಯ ಕ್ರೀಡಾ ಸಂಘದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಭರತ್ ಪೂಜಾರಿ ಮಳಲಿ ಆಯ್ಕೆ
ಕೈಕಂಬ: ಮಳಲಿ ರಾಮಾಂಜನೇಯ ಕ್ರೀಡಾ ಸಂಘದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಭರತ್ ಪೂಜಾರಿ ಮಳಲಿ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ನೂತನ ಗೌರವಾಧ್ಯಕ್ಷರಾಗಿ ಗಣೇಶ್ ಸಪಲಿಗ ಮಳಲಿ, ಅಧ್ಯಕ್ಷರಾಗಿ ಭರತ್ ಪೂಜಾರಿ ಮಳಲಿ, ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಸಪಲಿಗ, ಉಪ ಕಾರ್ಯದರ್ಶಿ ಧನುಷ್ ಮತ್ತು ಕೋಶಾಧಿಕಾರಿಯಾಗಿ ದೀಕ್ಷಿತ್ ಕುಲಾಲ್,
ಕ್ರೀಡಾ ವಿಭಾಗದ ಕಾರ್ಯದರ್ಶಿಗಳಾಗಿ ದೇವದಾಸ್ ಹಾಗೂ ಶೈಲೇಶ್ ಮುಳ್ಳಗುಡ್ಡೆ, ಕ್ರೀಡಾತಂಡದ ನಾಯಕನಾಗಿ (ಕ್ಯಾಪ್ಟನ್) ವಿಶಾಲ್ ಕುಲಾಲ್ ಮತ್ತು ಉಪ ನಾಯಕನಾಗಿ ನಿತಿನ್ ಕುಲಾಲ್, ಸಂಘದ ಸಾಮಾಜಿಕ ಜಾಲತಾಣದ ಉಸ್ತುವಾರಿಗಳಾಗಿ ಪೂಜಿತ್ ಹಾಗೂ ಜೀವನ್ ಕುಲಾಲ್, ಸಾಂಸ್ಕೃತಿಕ ಆಡಳಿತ ಮಂಡಳಿಯ ಜವಾಬ್ದಾರಿಯನ್ನು ಶ್ರೀನಿಧಿ ಮತ್ತು ವಿಜಯ್ ಕುಮಾರ್ ಅವರಿಗೆ ನೀಡಲಾಗಿದೆ.
ಸಂಘದ ಹಿರಿಯ ಮುಖಂಡರು, ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.