ಗಣೇಶಪುರ:ಲಯನ್ಸ್ ಕ್ಲಬ್ ವತಿಯಿಂದ ಪ್ರಯಾಣಿಕರ ತಂಗುದಾಣ ಕೊಡುಗೆ
ಕಾಟಿಪಳ್ಳ: ನಾವು ಮಾಡುವ ಸೇವೆ ಕೇವಲ ತೋರಿಕೆಗೆ ಆಗಿರದೆ, ಸಮಾಜಕ್ಕೆ ಅಗತ್ಯವಿರುವ, ಜನರಿಗೆ ಪ್ರಯೋಜನಕ್ಕೆ ಬರುವ ರೀತಿಯಲ್ಲಿ ಮಾಡಿದಾಗ ಮಾತ್ರ ಅದು ನಿಜವಾದ ಸಾರ್ವಜನಿಕ ಸೇವೆಯಾಗುತ್ತದೆ ಎಂದು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317D ಯ ನಿಕಟಪೂರ್ವ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಹೇಳಿದರು.
ಲಯನ್ಸ್ ಪ್ರಾಂತ್ಯ 9 ರ ಪ್ರಾಂತ್ಯ ಸಮ್ಮೇಳನ ದೀಕ್ಷಾ ಇದರ ಸವಿನೆನಪಿಗಾಗಿ, ಲಯನ್ಸ್ ವತಿಯಿಂದ ಗಣೇಶಪುರ ಕೈಕಂಬ ವೃತ್ತದ ಬಳಿ ನೂತನವಾಗಿ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣವನ್ನು ಲೋಕಾರ್ಪಣೆಗೈದು ಮಾತನಾಡಿದರು.
ಲಯನ್ಸ್ ಪ್ರಾಂತ್ಯ 9 ರ ನಿಕಟಪೂರ್ವ ಪ್ರಾಂತ್ಯ ಅಧ್ಯಕ್ಷ ಮಾಧವ ಎಸ್. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂತ್ಯದ ನಿಕಟಪೂರ್ವ ಪ್ರಥಮ ಮಹಿಳೆ ಮಿರಾವಾಣಿ ಎಂ. ಶೆಟ್ಟಿ, ಲಯನ್ಸ್ ಜಿಲ್ಲಾ ಸಂಪುಟದ ನಿಕಟಪೂರ್ವ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ದೀಕ್ಷಾ ಪ್ರಾಂತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ದೀಪಕ್ ಪೆರ್ಮುದೆ, ಕಾರ್ಯದರ್ಶಿ ರಮೇಶ್ ರಾಥೋಡ್, ಜೊತೆ ಕಾರ್ಯದರ್ಶಿ ಯತಿರಾಜ್ ಸಾಲ್ಯಾನ್, ಕಾಟಿಪಳ್ಳ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ. ದಯಕರ, ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಜಯೇಶ್ ಗೋವಿಂದ, ಗಣೇಶಪುರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಮನಪಾ ಮಾಜಿ ಕಾರ್ಪರೇಟ್ ಲೋಕೇಶ್ ಬೊಳ್ಳಾಜೆ, ಕೋರ್ದಬ್ಬು ದೇವಸ್ಥಾನದ ಅಧ್ಯಕ್ಷ ದಿನೇಶ್ ಶೆಟ್ಟಿ, ನಿತ್ಯಾನಂದ ಭಜನಾ ಮಂಡಳಿಯ ಶಶಿಧರ್ ಶೆಟ್ಟಿ, ಬಾಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪದ್ಮನಾಭ ಸಾಲ್ಯಾನ್, ಕಾಟಿಪಳ್ಳ ಲಯನ್ಸ್ ಕ್ಲಬ್ ಕಾರ್ಯದರ್ಶಿ ಗಣೇಶ್ ಶೆಟ್ಟಿ, ಕೋಶಾಧಿಕಾರಿ ವಿನೋದ್ ಕುಮಾರ್, ಮಾಜಿ ಅಧ್ಯಕ್ಷ ಶಿವಪ್ರಸಾದ್ ಬಾಳ, ವಿಶ್ವನಾಥ್ ಭಂಡಾರಿ, ಸದಸ್ಯರುಗಳಾದ ರಾಜಾರಾಂ ಸಾಲ್ಯಾನ್, ಪುಷ್ಪರಾಜ್ ಅಡಪ, ವಿಶ್ವನಾಥ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ದೀಪಕ್ ಎಸ್.ಪೂಜಾರಿ, ಆನಂದ ಅಮೀನ್, ಕಿಶೋರ್ ಶೆಟ್ಟಿ, ಸ್ಥಳೀಯ ವರ್ತಕರಾದ ಶುಕ್ರು ಸಾಹೇಬ್, ವಿಶ್ವನಾಥ್ ಶೆಟ್ಟಿ, ಸೀತಾರಾಮ ಪೂಜಾರಿ, ಪುರುಷೋತ್ತಮ, ಹರೀಶ್ ಟೈಲರ್, ವಿಠಲ ಶೆಟ್ಟಿಗಾರ್, ಮೊದಲಾದವರು ಉಪಸ್ಥಿತರಿದ್ದರು.
ಕಾಟಿಪಳ್ಳ ಕೃಷ್ಣಾಪುರ ಲಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಕುರುವನ ಸ್ವಾಗತಿಸಿ, ಕೋಶಾಧಿಕಾರಿ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಮಾಜಿ ಅಧ್ಯಕ್ಷ ಉಮಾನಾಥ ಅಮೀನ್ ಧನ್ಯವಾದವಿತ್ತರು.
ಇದೇ ಸಂದರ್ಭದಲ್ಲಿ ಕಾಟಿಪಳ್ಳ ಲಯನ್ಸ್ ಕ್ಲಬ್ ವತಿಯಿಂದ ಕಾಟಿಪಳ್ಳ 3 ನೇ ವಿಭಾಗದ ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 35 ಸಾವಿರ ವೆಚ್ಚದ ಧ್ವನಿವರ್ಧಕವನ್ನು ನೀಡಲಾಯಿತು.