Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವಿಶ್ವ ದೇವಾಡಿಗ ಮಹಾಮಂಡಳದ ಆಶ್ರಯದಲ್ಲಿ ಡಿ.20 ರಂದು ಮಹಾ ಅಧಿವೇಶನ, ಪೂರ್ವಬಾವಿ ಸಭೆ

ಕಾಟಿಪಳ್ಳ : ವಿಶ್ವ ದೇವಾಡಿಗ ಮಹಾಮಂಡಳದ ಆಶ್ರಯದಲ್ಲಿ ಡಿ.20  ರಂದು ಉಡುಪಿಯ ಚಿತ್ಪಾಡಿ ಬಯಲು ರಂಗವೇದಿಕೆಯಲ್ಲಿ ನಡೆಯಲಿರುವ ಮಹಾ ಅಧಿವೇಶನದ ಪೂರ್ವಬಾವಿ ಸಭೆಯು ಕೃಷ್ಣಾಪುರ ಕಾಂತ ಬಸ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಕಾಟಿಪಳ್ಳ ಇಲ್ಲಿನ ದಿ. ವೀರಪ್ಪ ದೇವಾಡಿಗ ವೇದಿಕೆಯಲ್ಲಿ ವಿಶ್ವ ಮಹಾ ಮಂಡಳದ ಅಧ್ಯಕ್ಷ  ಧರ್ಮಪಾಲ್ ಯು ದೇವಾಡಿಗರವರ  ಅಧ್ಯಕ್ಷತೆಯಲ್ಲಿ  ಜು.19 ರಂದು ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಪಾಲ್ ದೇವಾಡಿಗ ಅವರು ನಮ್ಮ ಬೇಡಿಕೆಗಳು ಸರಕಾರದ ಮಟ್ಟಕ್ಕೆ ಮುಟ್ಟಲು ಈ ಮಹಾ ಅಧಿವೇಶನ ಅಗತ್ಯವೆಂದು 
ವಿವರಿಸಿದರು. ತನ್ನನ್ನು ಅಭಿನಂದಿಸಿದ ಬಗ್ಗೆ ಉತ್ತರವಾಗಿ ಈ ಸನ್ಮಾನವು ನನ್ನ ಜೊತೆ ಹಗಲಿರುಳು ಶ್ರಮಿಸುವ ನನ್ನ ತಂಡಕ್ಕೆ ಸಲ್ಲಿಸುವುದಾಗಿ ತಿಳಿಸಿದರು.ಮುಂಬೈ ಸಂಘದ ಅಧ್ಯಕ್ಷ  ರವಿ ಎಸ್ ದೇವಾಡಿಗ, ಮಹಾ ಮಂಡಳದ   ಪ್ರದಾನ ಕಾರ್ಯದರ್ಶಿ  ಗಣೇಶ್ ಅಂಬಲಪಾಡಿ, ಕಾರ್ಯದರ್ಶಿ ಯಾದವ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಣಂಬೂರು , ಪವನ್ ಕುಮಾರ್ ಧರ್ಮಪಾಲ್  ಸಭೆಯಲ್ಲಿ  ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಚೆನ್ನಪ್ಪ ಮೊಯಿಲಿ, ಕೋಶಾಧಿಕಾರಿ ಸುರೇಶ, ಕೊಡವೂರು ಕಾಂತ ಬಸ ಟ್ರಸ್ಟಿನ ಹಿರಿಯರಾದ ಗುಡ್ಡಣ್ಣದೇವಾಡಿಗ ಹಾಗೂ ಕುಟುಂಬದ ಸರ್ವಸದಸ್ಯರುಗಳು ಉಪಸ್ಥಿತರಿದ್ದರು  ವಸಂತ ದೇವಾಡಿಗ ಸ್ವಾಗತಿಸಿದರು. ಅಶೋಕ್ ಪಾವಂಜೆ ಕಾರ್ಯಕ್ರಮ  ಸಂಯೋಜನೆ ಮಾಡಿದ್ದರು. ವಸಂತ ದೇವಾಡಿಗ ವಂದಿಸಿದರು.