Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲಮ್ಮನಿಗೆ ರಂಗ ಪೂಜೆ, ಅತ್ತೂರು ಕೊಡೆತ್ತೂರು ಗ್ರಾಮಸ್ಥರ ಫಲಿಸಿದ ಪ್ರಾರ್ಥನೆ



ಕಟೀಲು:ಮಳೆಗಾಗಿ‌ ಪ್ರಾರ್ಥಿಸಿ ಕಟೀಲು ದುರ್ಗೆಗೆ ಸಲ್ಲಿಸಿದ ರಂಗಪೂಜೆ ಸೇವೆ ಇದೀಗ ಫಲಿಸಿದ್ದು ಗುರುವಾರ ರಾತ್ರಿ ಭಾರೀ ಮಳೆಯಾಗಿದೆ. ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಕೃಷಿ ಕಾರ್ಯಕ್ಕೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ,  ಈ‌ಕಾರಣದಿಂದ ಕಟೀಲು ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಕೊಡೆತ್ತೂರು ಮಾಗಣೆ ಗ್ರಾಮಸ್ಥರು  ಕಟೀಲು ದುರ್ಗೆಗೆ  ಗುರುವಾರ ಸಂಕ್ರಾಂತಿಯ ಶುಭ ಸಂದರ್ಭದಂದು ರಂಗಪೂಜೆ ಸೇವೆ ನೀಡಿದ್ದು, ರಂಗಪೂಜೆ  ನಡೆದು ಕೇವಲ ಒಂದು ಗಂಟೆ ಒಳಗೆ ಮಳೆ ಪ್ರಾರಂಭವಾಗಿದೆ, ರಾತ್ರಿ ನಿರಂತರ ಮಳೆಯಾದ ಕಾರಣ ನಂದಿನಿ ನದಿ ತುಂಬಿ ಹರಿಯುತಿದೆ, ಈ ಬಾರಿ‌ ಮೊದಲ ಬಾರಿಗೆ ನಂದಿನಿ ನದಿ ತುಂಬಿ ಹರಿಯುತ್ತಿದೆ. ಮೂಲ್ಕಿ ತಾಲೂಕಿನಲ್ಲಿ 166.3 ಸೆಂಟಿ ಮೀಟರ್ ಮಳೆಯಾಗಿದೆ. ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತರ ಪ್ರಾರ್ಥನೆ ಫಲಿಸಿತು ಎಂದು ಇದೀಗ ಮಾಗಣೆ ಭಕ್ತರು ಹೇಳುತ್ತಿದ್ದಾರೆ