ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗದ ಗೋಪುರದ ಡ್ರೋನ್ ಮೂಲಕ ಸ್ವಚ್ಚತೆ
ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗದ ಗೋಪುರವನ್ನು ಸ್ವಚ್ಚಗೊಳಿಸಲು ಡ್ರೋನ್ ಬಳಸಲಾಯಿತು, ಎತ್ತರವಾಗಿರುವ ಮುಂಭಾಗದ ಗೋಪುರ ಸ್ವಚ್ಚತೆಗೆ ಕಷ್ಟದಾಯಕವಾಗಿದ್ದು, ಇದಕ್ಕಾಗಿ ದುರ್ಗಾ ಫೆಸಿಲಿಟಿಯ ವತಿಯಿಂದ ಗೋಪುರ ಸ್ವಚ್ಚಗೊಳಿಸುವ ಕಾರ್ಯ ಬುಧವಾರ ನಡೆಯಿತು, ಮೊದಲು ಡ್ರೋನ್ ಮೂಲಕ ನೀರು ಸಿಂಪಡಿಸಿ ನಂತರ ಸೋಪು ಆಯಿಲ್ ನಂತರ ಮತ್ತೆ ನೀರಿ ಬಳಸಿ ಸ್ವಚ್ಚಗೊಳಿಸಲಾಯಿತು.