Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು ಶಾಲೆಯಲ್ಲಿ ವನಮಹೋತ್ಸವ, ಪ್ಲಾಸ್ಟಿಕ್ ಜಾಗೃತಿ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಜನನಿ ಜನ ಸೇವಾ ಸಂಸ್ಥೆ ಉಲ್ಲಂಜೆ ಇದರ ವತಿಯಿಂದ ಸಸಿಗಳನ್ನು ವಿತರಿಸಲಾಯಿತು.
ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಮುಖ್ಯ ಅಧಿಕಾರಿ ಜಯಶಂಕರ್ ಪ್ರಸಾದ್ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದರಲ್ಲದೆ, ಮಕ್ಕಳಿಗೆ ಬಟ್ಟೆಯ ಕೈಚೀಲಗಳನ್ನು ವಿತರಿಸಿದರು.
ಕಟೀಲು ದೇಗುಲದ ಅರ್ಚಕ ಸದಾನಂದ ಆಸ್ರಣ್ಣ ಶಾಲಾ ಆವರಣದಲ್ಲಿ ಸಸಿಯೊಂದನ್ನು ನೆಟ್ಟು, ಎಲ್ಲರೂ ಪರಿಸರ ಪ್ರೀತಿಯೊಂದಿಗೆ ಗಿಡಗಳನ್ನು ಬೆಳೆಸಬೇಕೆಂದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯರಾದ ಪ್ರಕಾಶ್ ಆಚಾರ್, ಲೋಕಯ್ಯ ಸಾಲಿಯಾನ್, ಸಂತಾನ್ ಡಿಸೋಜ, ಶ್ರೀಮತಿ ಕೋಕಿಲಾ ಅಮೀನ್, ತಿಮ್ಮಪ್ಪ ಕೋಟ್ಯಾನ್, ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜಕ ದಯಾನಂದ ಮಾಡ, ರೋಟರಿ ಸಂಸ್ಥೆಯ ಶರತ್ ಶೆಟ್ಟಿ, ಶಾಲಾ ಮುಖ್ಯಸ್ಥರಾದ ಚಂದ್ರಶೇಖರ ಭಟ್, ಶ್ರೀಮತಿ ಸರೋಜಿನಿ ಮತ್ತಿತರರಿದ್ದರು.