ಜು.26:ಐಕಳ ಕೊಮುಂಡೇಲುವಿನ ಶ್ರೀ ಬಬ್ಬುಸ್ವಾಮೀ ದೈವಸ್ಥಾನದ ಸಭಾಭವನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ
ಕಿನ್ನಿಗೋಳಿ:ಕಾಂತಾಬಾರೆ ಬೂದಾಬಾರೆ ಮಹಿಳಾ ಸಂಘ, ಐಕಳ ನೇತೃತ್ವದಲ್ಲಿಐಕಳಬಾವ ಕಾಂತಾಬಾರೆ - ಬೂದಾಬಾರೆ ಕಂಬಳ ಸಮಿತಿ ಐಕಳ ಮತ್ತು ಮುಂಬಯಿ,ಕಾಂತಾಬಾರೆ - ಬೂದಾಬಾರೆ ಫ್ರೆಂಡ್ಸ್ ಕ್ಲಬ್, ಐಕಳ ಇವರ ವಿಶೇಷ ಸಹಕಾರದೊಂದಿಗೆ ಜು.26 ರಂದು ಐಕಳ ಕೊಮುಂಡೇಲುವಿನ ಶ್ರೀ ಬಬ್ಬುಸ್ವಾಮೀ ದೈವಸ್ಥಾನದ ಸಭಾಭವನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ಕಾರ್ಯಕ್ರಮದಲ್ಲಿ ಆಷಾಡ ತಿಂಗಳ ತಿಂಡಿ ತಿನಿಸುಗಳ ಸಹಭೋಜನ,ತುಳುನಾಡ ಸಾಂಸ್ಕೃತಿಕ ಕಾರ್ಯಕ್ರಮಗಳು,ಆಟಿದ ಮದಿಪು ಕಾರ್ಯಕ್ರಮಗಳು ನಡೆಯಲಿದೆ.