Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ತರಬೇತಿ ಕಾರ್ಯಗಾರ



ಹಳೆಯಂಗಡಿ : ದಕ್ಷಿಣ ಕನ್ನಡ ಜಿಲ್ಲೆ ಸಹಕಾರ ಇಲಾಖೆಯ ನೇತೃತ್ವದಲ್ಲಿ ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಶ್ರಯದಲ್ಲಿ
ಕೇಂದ್ರ ಸಹಕಾರ ಇಲಾಖೆ 5 ವರ್ಷ ಪೂರ್ಣಗೊಂಡ ಪ್ರಯುಕ್ತ "ಸಹಕಾರ ಸಪ್ತಾಹ'ದ ಅಂಗವಾಗಿ ಮುಲ್ಕಿ ತಾಲ್ಲೂಕು ಮಟ್ಟದ ಸಹಕಾರ ಸಂಘಗಳ ನಿರ್ದೇಶಕರು ಮತ್ತು ಸಿಬ್ಬಂದಿಗಳಿಗೆ "ಸಹಕಾರ ಸಂಘಗಳ ನಿರ್ವಹಣೆಯಲ್ಲಿ ನಮ್ಮ ಪಾತ್ರ" ದ ಬಗ್ಗೆ ತರಬೇತಿ ಕಾರ್ಯಗಾರವು ಬುಧವಾರ ಹಳೆಯಂಗಡಿಯ
ಹರಿಓಂ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಬೆಂಗಳೂರು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಮಾಜೀ ಪ್ರಧಾನಿ ಜವಹರಲಾಲ ನೆಹರು ಅವರಿಂದ ಆರಂಭಗೊಂಡ ಸಹಕಾರಿ ಚಳುವಳಿ ಅವಿಭಾಜಿತ ದಕ್ಷಿಣ ಹಾಗೂ ಉಡುಪಿ ಜಿಲ್ಲೆಯಲ್ಲಿ ಮೊಳಹಳ್ಳಿ ಶಿವರಾಯರು ಮತ್ತು  ಕಾರ್ನಾಡ್ ಶಿವರಾಯರು  ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದರಿಂದ ಸಹಕಾರಿ ಕ್ಷೇತ್ರ ಬಹಳಷ್ಟು ಮಟ್ಟಿಗೆ ಬೆಳೆದು ಬಂದಿದೆ.ಕಾರ್ಯಾಧ್ಯಕ್ಷತೆ, ಸೇವಾಮನೋಭಾವನೆ, ವಿಶ್ವಾಸಾರ್ಹತೆ ಮೂಲಕ ಸಹಕಾರಿ ಸಂಘದ ಬೆಳವಣಿಗೆ ಸಾಧ್ಯ, ಸಹಕಾರಿ ಸಂಘ ಅದ್ಭುತ ಶಕ್ತಿಯಾಗಿದ್ದು ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ  ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವಿದೆ ಎಂದರು 
ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪ್ರತಿಸ್ಪರ್ಧಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್ ಜನರ ವಿಶ್ವಾಸಾರ್ಹತೆಗಳಿಸಿದ್ದು, ಅದರ ಅಭಿವೃದ್ಧಿ ಹರಿಕಾರ ಡಾ. ಎಂ ಎನ್ ರಾಜೇಂದ್ರ ಕುಮಾರ್ ರವರ ಪ್ರೇರಣೆಯಿಂದ ಸಂಸ್ಥೆ ಬಹಳಷ್ಟು ಎತ್ತರಕ್ಕೆ ಬೆಳೆದಿದೆ.
ಇದು ಉಳಿದ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ವಹಿಸಿ ಮಾತನಾಡಿದರು 
ಮುಖ್ಯ ಅತಿಥಿಗಳಾಗಿ ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ
ವೈ. ಸುಧೀರ್ ಕುಮಾರ್ ಮಾತನಾಡಿ ಸಹಕಾರಿ ಸಂಘಗಳಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಎರಡು ಚಕ್ರಗಳು ಇದ್ದಂತೆ,, ಗ್ರಾಹಕರ ಜೊತೆ ಅನ್ಯೋನ್ಯತೆ ಇದ್ದರೆ ಸಂಘದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ಪಟ್ಟರು
ಸ್ವಸಹಾಯ ಸಂಘದ ಪ್ರೇರಕಿ ನೀತು ನಿರಂಜಲ ಪ್ರಾರ್ಥಿಸಿದರು,, ಸೊಸೈಟಿ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಸ್ವಾಗತಿಸಿದರು, ಕಾರ್ಯನಿರ್ವಣಾಧಿಕಾರಿ ಸುದರ್ಶನ್ ಧನ್ಯವಾದ ಅರ್ಪಿಸಿದರು, ಲೆಕ್ಕಿಗ ಲೋಲಾಕ್ಷಿ ನಿರೂಪಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಹಾಗೂ ಕರ್ನಾಟಕ ಸಹಕಾರ ಸಂಘಗಳ ತರಬೇತಿದಾರ. ವಕೀಲಶ್ರೀಧರ್ ಪಿ.ಎಸ್  ರವರು ಮುಲ್ಕಿ ತಾಲ್ಲೂಕು ಮಟ್ಟದ ಸಹಕಾರ ಸಂಘಗಳ ನಿರ್ದೇಶಕರು ಮತ್ತು ಸಿಬ್ಬಂದಿಗಳಿಗೆ "ಸಹಕಾರ ಸಂಘಗಳ ನಿರ್ವಹಣೆಯಲ್ಲಿ ನಮ್ಮ ಪಾತ್ರ" ದ ಬಗ್ಗೆ ತರಬೇತಿ ಕಾರ್ಯಗಾರ ನಡೆಸಿಕೊಟ್ಟರು