Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸ್ವಚ್ಚತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಲಿ - ಮಂದಾರ ವಿ.ಕಾಳೆ

ಮಂಗಳೂರು: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್, ಲಿಮಿಟೆಡ್ ವತಿಯಿಂದ, ಪೆರ್ಮುದೆ ಗ್ರಾಮ‌ಪಂಚಾಯತ್, ಬಾಳ ಗ್ರಾಮ‌ಪಂಚಾಯತ್,  ನಾಗರಿಕಾ ಸಲಹಾ ಸಮಿತಿ ಸುರತ್ಕಲ್,  ಕೇಸರಿ ಪ್ರೆಂಡ್ಸ್ , ಎಸ್.ಕೆ.ಪಿ.ಎ  ಸುರತ್ಕಲ್ ವಲಯ,  ಜೆಸಿಐ ಗಣೇಶ್ ಪುರ, ನಾರಾಯಣಗುರು ಶಾಲೆ ಕೃಷ್ಣಾಪುರ, ಗೋವಿಂದದಾಸ ಕಾಲೇಜು ಸುರತ್ಕಲ್ ಸಹಕಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಎಂ ಅರ್ ಪಿ ಎಲ್   ಚೋಟಾ ಗೇಟ್ ನಿಂದ ಬಾಳ ಪಂಚಾಯತ್ ವರೆಗೆ ನಡೆಯಿತು.ರಸ್ತೆಯ ಎರಡೂ ಮಗ್ಗುಲಲ್ಲಿ ಪ್ಲಾಸ್ಟಿಕ್, ಬಟ್ಟೆ ಮತ್ತಿತರ ತ್ಯಾಜ್ಯವನ್ನು ತೆಗೆದು ಸ್ವಚ್ಚಗೊಳಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಸಿ.ಎಸ್.ಆರ್ ವಿಭಾಗದ ಜನರಲ್ ಮ್ಯಾನೇಜರ್ ಮಂದಾರ ವಿ‌ ಕಾಳೆ  ಪರಿಸರವನ್ನು ಸ್ವಚ್ಚವಾಗಿಡುವ ಜೊತೆ,  ಸ್ವಚ್ಚತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು, ಮಕ್ಕಳಿಗೆ ಈ ಬಗ್ಗೆ ಮನದಟ್ಟು ಮಾಡಬೇಕು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು ಎಂದರು. ಈ ಸಂದರ್ಭ ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್ ವಿಭಾಗದ ಅಧಿಕಾರಿ ಕೇಶವ ಪಾಟಾಲಿ, ಪೆರ್ಮುದೆ ಪಂಚಾಯತ್ ಪಿ.ಡಿ.ಒ ರಮೇಶ್ ರಾಥೊಡ್,  ನಾಗರಿಕಾ ಸಲಹಾ ಸಮಿತಿಯ ಅಧ್ಯಕ್ಷ ರಾಜ್ ಮೋಹನ್ ಕಾರ್ಯದರ್ಶಿ ಸತೀಶ್ ಸದಾನಂದ್, 
ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ದೇವಿಚರಣ್ ಶೆಟ್ಟಿ, ದೀಪಕ್ ಪೆರ್ಮುದೆ, ಅಶ್ವಿನಿ ಶೇಖ, ದಯಾಕರ್, ದೇವಿಪ್ರಸಾದ್ ಶೆಟ್ಟಿ, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.