Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಗಿಡ ಮರಗಳಿಗೆ ಉಸಿರು ನೀಡುವ ಕೆಲಸ ನಮ್ಮಿಂದಾಗಲಿ: ಡಾ. ಮಂಜು ರಾಜಣ್ಣ

ಚೇಳ್ಯಾರು: ಪ್ರಕೃತಿ ನಮಗೆ ಶುದ್ಧ ಗಾಳಿ ಬೆಳಕನ್ನು ನೀಡುವ ಮೂಲಕ  ಹೇಗೆ ಉಸಿರಾಗಿದೆಯೋ ಅದೇ ರೀತಿ ನಾವು ಗಿಡ ಮರಗಳನ್ನು ನೆಟ್ಟು ಪೋಷಿಸುವ ಮೂಲಕ ನಾವು ಪ್ರಕೃತಿಗೆ ಉಸಿರಾಗಿ ಜೀವ ತುಂಬಿದಾಗಮಾತ್ರ ಉತ್ತಮ ಪರಿಸರ ನಿರ್ಮಾಣವಾಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ.ಮಂಜು ರಾಜಣ್ಣ ಹೇಳಿದರು.
      ಅವರು ಇತ್ತೀಚೆಗೆ ಪ್ರೈಮಸಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಬೈಕಂಪಾಡಿ ಮತ್ತು ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ಇದರ ಜಂಟಿ ಆಶ್ರಯದಲ್ಲಿ, ಸುರತ್ಕಲ್ ಚೆಳ್ಯಾರು ಬಳಿ ಇರುವ ಮಧ್ಯ ವಾಲ್ಮೀಕಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗೆ ನಡೆದ ಪರಿಸರ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದ ಭಾಗವಹಿಸಿ   ಮಾತನಾಡಿದರು.
        ಪ್ರೈಮಸಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಬೈಕಂಪಾಡಿ ಇದರ ಪರಿಸರ, ಆರೋಗ್ಯ ಮತ್ತು ಸುರಕ್ಷತೆ ವಿಭಾಗದ ಮುಖ್ಯ ಸಲಹೆಗಾರ ಜೀವನ್ ಉಳ್ಳಾಲ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 
ಪ್ರಬಂಧಕ ಪ್ರದೀಪ್ ಕುಮಾರ್, ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ಅಧ್ಯಕ್ಷ ಪಿ. ದಯಕರ ಸುವರ್ಣ, ಖ್ಯಾತ ಪರಿಸರವಾದಿ ಮಾಧವ ಉಳ್ಳಾಲ್, ಲಯನ್ಸ್  ಲಯನ್ಸ್ ಪ್ರಾಂತೀಯ ರಾಯಭಾರಿ ಮಾಧವ ಎಸ್. ಶೆಟ್ಟಿ,  ಕಾಟಿಪಳ್ಳ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಉಮಾನಾಥ ಅಮೀನ್, ಶಿವಪ್ರಸಾದ್ ಬಾಳ, ಲೋಕೇಶ್ ಕುರುವನ, ವಿಶ್ವನಾಥ್ ಭಂಡಾರಿ, ಗಣೇಶ್ ಶೆಟ್ಟಿ ಸದಸ್ಯರುಗಳಾದ ಪುಷ್ಪರಾಜ್ ಅಡಪ, ಆನಂದ ಅಮೀನ್, ಸ್ಥಳೀಯ ಹಿರಿಯ ಮುಖಂಡ ಭೋಜ ಅಂಚನ್ , ಶಿಕ್ಷಕಿ ತಾರಾ ಬಾಯಿ ಮೊದಲಾದವರು ಉಪಸ್ಥಿತರಿದ್ದರು.
     ಮಹರ್ಷಿ ವಾಲ್ಮೀಕಿ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಸುನಂದ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಪ್ರೈಮಸಿ  ಇಂಡಸ್ಟ್ರೀಸ್ ನ ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಪ್ರಬಂದಕಿ ಸೌಮ್ಯ ಧನ್ಯವಾದ ಸಮರ್ಪಿಸಿದರು.