ಸ್ವಚ್ಛತಾ ಪಾಕ್ಷಿಕ - 2026 ರ ಪ್ರಯುಕ್ತ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ತಪಾಸಣೆ ಶಿಬಿರ
ಸುರತ್ಕಲ್ :ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್, ಲಿಮಿಟೆಡ್, ಮಂಗಳೂರು, ಚೇಳ್ಯಾರು ಗ್ರಾಮ ಪಂಚಾಯತ್ ಮತ್ತು ವಿದ್ಯಾ ವಿಕಾಸ ಟ್ರಸ್ಟ್, ಚೇಳ್ಯಾರು ಇದರ ಸಹಭಾಗಿತ್ವದಲ್ಲಿ ...
ಕೆ. ಎಂ. ಸಿ. ಆಸ್ಪತ್ರೆ ಅತ್ತಾವರ, ಮಂಗಳೂರು, ಪರಣಿತ ವೈದ್ಯರ ತಂಡದೊಂದಿಗೆ ಸ್ವಚ್ಛತಾ ಪಾಕ್ಷಿಕ - 2026 ರ ಪ್ರಯುಕ್ತ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ತಪಾಸಣೆ ಶಿಬಿರ ಕಳುವಾರು ಹಿರಿಯ ಪ್ರಾಥಮಿಕ ಶಾಲೆ ಚೇಳ್ಯಾರು ಕಾಲೊನಿಯಲ್ಲಿ ನಡೆಯಿತು.
ಸಾಮಾನ್ಯ ರೋಗ ವಿಭಾಗ, ಎಲುಬು ಮತ್ತು ಕೀಲು ರೋಗ ವಿಭಾಗ, ಕಣ್ಣಿನ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ಮಕ್ಕಳ ರೋಗ ವಿಭಾಗ, ಚರ್ಮ ರೋಗ ವಿಭಾಗ, ಮತ್ತು ದಂತ ವಿಭಾಗಕ್ಕೆ ಸಂಬಂಧಪಟ್ಟಂತೆ ವಿವಿಧ ವಿಭಾಗದ ಪರಿಣತಿ ಹೊಂದಿರುವ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಇದರ ಪ್ರಯೋಜನವನ್ನು ಪಡೆದುಕೊಂಡರು..
ಈ ಸಂದರ್ಭದಲ್ಲಿ ಎಂ ಆರ್ ಪಿ ಎಲ್ ಸಂಸ್ಥೆಯ ಸಿ ಎಸ್ ಆರ್ ವಿಭಾಗದ ಜಿ ಎಮ್. ಮಂದಾರ ಕಾಳೆ, ಮ್ಯಾನೇಜರ್ ಕೇಶವ ಪಾಟಾಳಿ, ಹರೀಶ್ ರಾವ್, ಪಂಚಾಯತ್ ಮಾಜಿ ಅಧ್ಯಕ್ಷ ಜಯಾನಂದ ಚೇಳ್ಯಾರು, ಕೆ ಎಂ ಸಿ ಆಸ್ಪತ್ರೆಯ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಎಕ್ಸ್ ಕ್ಯೂಟಿವ್ ಹರ್ಬರ್ಟ್ ಮರಿಯೊ ಪಿರೇರ, ಡಾl ನವ್ಯ,ಟ್ರಸ್ಟಿನ ಉಪಾಧ್ಯಕ್ಷ ರಾಘವ ಸನಿಲ್, ಎಸ್ ಡಿ ಎಂ ಸಿ ಅಧ್ಯಕ್ಷ ಗಂಗಾಧರ ಪೂಜಾರಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಶೋಭಾ ಸಿ. ಉಪಸ್ಥಿತರಿದ್ದರು.