Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಯುಗಪುರುಷ ಕಿನ್ನಿಗೋಳಿ ಆಶ್ರಯದಲ್ಲಿ ಮಹಾನ್ ವಿದ್ವಾಂಸ,ಅಧ್ಯಾಪಕ, ಕಲಾವಿದ,ಸಂಶೋಧಕ,ದಿ.ಪು ಶ್ರೀನಿವಾಸ ಭಟ್ ಕಟೀಲು ಸ್ಮೃತಿ ದಿನ ಕಾರ್ಯಕ್ರಮ

ಕಿನ್ನಿಗೋಳಿ:ಯುಗಪುರುಷ ಕಿನ್ನಿಗೋಳಿ ಇದರ ಆಶ್ರಯದಲ್ಲಿ ಮಹಾನ್ ವಿದ್ವಾಂಸ,ಅಧ್ಯಾಪಕ, ಕಲಾವಿದ,ಸಂಶೋಧಕ,ದಿ.ಪು ಶ್ರೀನಿವಾಸ ಭಟ್ ಕಟೀಲು ಇವರ  ಸ್ಮೃತಿ ದಿನ ಕಾರ್ಯಕ್ರಮ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ  ಶನಿವಾರ ನಡೆಯಿತು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ಕೆ ಲಕ್ಷ್ಮೀನಾರಾಯಣ ಆಸ್ರಣ್ಣರವರು  ಶುಭಾಶಂಸನೆ ಮಾಡಿದರು.

 ಕ‌.ಸಾ.ಪ ಬೆಂಗಳೂರು ಮಾಜಿ  ರಾಜ್ಯಾಧ್ಯಕ್ಷರಾದ ಡಾ.ಹರಿಕೃಷ್ಣ  ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜ್ಯೋತಿಷಿ ವಿಶ್ವನಾಥ್ ಭಟ್ ಎಸ್ ಕೋಡಿ ಅವರು ಯುಗಪುರುಷದ ಪ್ರಕಟನಾಲಯದ 541 ನೇ ಕೃತಿ ಪು.ಶ್ರೀ.ಸ್ಮೃತಿ ಬಿಡುಗಡೆ ಮಾಡಿದರು.


ಮಣಿಪಾಲ ಮಾಹೆ,ವಿ.ವಿ ಯ ಪ್ರಸಾರಾಂಗ ವಿಭಾಗದ ಪ್ರಧಾನ  ಸಂಪಾದಕ ಡಾ.ಶ್ರೀನಿವಾಸ ಎನ್. ಆಚಾರ್ಯ, ಮಂಗಳೂರು ಕಲ್ಕೂರ ಪ್ರತಿಷ್ಠಾನ ದ ಅಧ್ಯಕ್ಷ  ಪ್ರದೀಪ್ ಕುಮಾರ್ ಕಲ್ಕೂರ,ಡಾ.ಎಂ ಪ್ರಭಾಕರ ಜೋಶಿ,ಡಾ.ಪಾದೆಕಲ್ಲು ವಿಷ್ಣು ಭಟ್,ಡಾ.ಡಿ ಎಸ್ ಶ್ರೀಧರ ಕಿನ್ನಿಗೋಳಿ, ಉಷಾ ವಿಶ್ವನಾಥ ಭಟ್ ಕಿಲ್ಪಾಡಿ,ಡಾ.ಪದ್ಮನಾಭ ಭಟ್ ಎಕ್ಕಾರು,ಡಾ.ಬಿ ಜನಾರ್ದನ ಭಟ್,ಪ್ರಥ್ವಿರಾಜ  ಕವತ್ತಾರು , ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಡಾ.ಎಂ.ಪ್ರಭಾಕರ ಜೋಶಿಯವರಿಗೆ ಪು.ಶ್ರೀನಿವಾಸ ಭಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತುಪು.ಗುರುಪ್ರಸಾದ್ ಭಟ್ ಪ್ರಾಸ್ತಾವಿಕ ಮಾತನಾಡಿದರು.ಭುವನಾಭಿರಾಮ ಉಡುಪ ಸ್ವಾಗತಿಸಿದರು.ಶರತ್ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಕಲಾವಿದರಿಂದ ಯಕ್ಷಗಾನ  ಪ್ರದರ್ಶನ ನಡೆಯಿತು.